ಬಂಟ್ವಾಳ: ಸಣ್ಣ ಮತ್ತು ದೊಡ್ಡ ಸರಕು ವಾಹನ ಚಾಲಕರ –ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಆಗಸ್ಟ್ 15ರಂದು ಬಿ.ಸಿ.ರೋಡ್ ನ ರ ಕ್ತೇಶ್ವರೀ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರಮಾನಾಥ ಕಾರಂದೂರು ರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಕಾರ್ಯದರ್ಶಿ ಇಗ್ನೇಷಿಯಸ್ ತೌರೋ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು. 2017-18ನೇ ಸಾಲಿನ ಸಂಘದ ಅಧ್ಯಕ್ಷರಾಗಿ ರಮಾನಾಥ ಕಾರಂದೂರು , ಉಪಾಧ್ಯಕ್ಷರಾಗಿ ಪದ್ಮನಾಭ ಪೂಜಾರಿ, ಕಾರ್ಯದರ್ಶಿಯಾಗಿ ಇಗ್ನೇಷಿಯಸ್ ತೌರೋ , ಜತೆಕಾರ್ಯದರ್ಶಿ ನಾರಾಯಣ ಕುಲಾಲ್, ಕೋಶಾಧಿಕಾರಿ ಲತೀ ಫ್ ರವರನ್ನು ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿ ರಚಿಸಲಾಯಿತು.KAR_7828

ಸಂಘದ ವತಿಯಿಂದ ಇಬ್ರಾಹಿಂ ವಳಚ್ಚಿಲ್ ರವರಿಗೆ ಅಸೌಖ್ಯದ ಬಗ್ಗೆ ಕ್ಷೇಮನಿಧಿಯಿಂದ ರೂ.3000(ಮೂರು ಸಾವಿರ) ನೀಡಲಾಯಿತು. ಮುಖ್ಯ ಅತಿಥಿ ಎಂ.ಕೆ.ಖಾದರ್ ಸಂಘಕ್ಕೆ ಶುಭ ಹಾರೈಸಿದರು. ಜತೆ ಕಾರ್ಯದರ್ಶಿ ನಾರಾಯಣ ಕುಲಾಲ್ ವಂದಿಸಿದರು.

By Suddi9

Leave a Reply

Your email address will not be published. Required fields are marked *