ಬಂಟ್ವಾಳ: ಮುಡಿಪು ವಿಶ್ವಭಾರತಿ ಸಂಜೀವಿನಿ ಇದರ ವಿಶ್ವಭಾರತಿ ಯಕ್ಷೋತ್ಸವ 2017ರ ಅಭಿಯಾನದ 466ನೇ ಯಕ್ಷಗಾನ ತಾಳಮದ್ದಳೆಗೆ ಸಜೀಪಮೂಡ ಕಂದೂರು ಗೌರಿಗಣೇಶ ಸಭಾಭವನದಲ್ಲಿ ಎ.16ರಂದು ಚಾಲನೆ ದೊರಕಿತು. ಬಳಿಕ ಕಚ ದೇವಯಾಜಿ ಯಕ್ಷಗಾನ ತಾಳಮದ್ದಳೆ ನಡೆಯಿತು.


ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಧರ್ಮದರ್ಶಿ ಎಂ. ಸುಬ್ರಹ್ಮಣ್ಯ ಭಟ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಟ್ಗಮೂಲೆ ಲಕ್ಷ್ಮಿನಾರಾಯಣ ಭಟ್, ರಾಮಹೊಳ್ಳ,ದಿವಾಣ ಶಂಕರ ಭಟ್,ಶ್ಯಾಂ ಭಟ್ ಪಕಳಕುಂಜ,ಪ್ರಶಾಂತ್ ಕುಮಾರ್ ಬಳ್ಳೂರ,ವಿನಯ ಆಚಾರ್ಯ,ಶೇಣಿ ವೇಣಿ ಗೋಪಾಲ ಭಟ್,ಚಣೇಲ ಸುಬ್ರಹ್ಮಣ್ಯ ಭಟ್,ಕಾರ್ಯಕ್ರಮದ ಪ್ರಾಯೋಜಕರಾದ ಅಚ್ಯುತ ಮಯ್ಯ,ಕೆ. ಸುದರ್ಶನ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಅಭಿಯಾನದ ಮುಂದಿನ ಕಾರ್ಯಕ್ರಮಗಳು ಎ.22ರಂದು ಕನ್ಯಾನ ಬಾಳೆಕೋಡಿ ಕಾಶಿಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದಲ್ಲಿ ಭೀಷ್ಮವಿಜಯ ತಾಳಮದ್ದಳೆ ಮತ್ತು ಎ.29ರಂದು ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನರಕಾಸುರ ಮೋಕ್ಷ ತಾಳಮದ್ದಳೆ ಜರಗಲಿದೆ ಎಂದು ಪ್ರಕಟನೆ ತಿಳಿಸಿತು.
