ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗವು ಪರಿಸರ ಸಂರಕ್ಷಣೆ ಕುರಿತಾಗಿ ಜಾಗೃತಿ ಪ್ರಚಾರ ಕಾರ್ಯಕ್ರಮಕ್ಕೆ ಪೂರಕವಾಗಿ ಜಲಸಂರಕ್ಷಣೆಯ ಜಾಗೃತಿಗಾಗಿ ಬೀದಿನಾಟಕ ನಡೆಯಿತು.
`ಮೀಡಿಯಾ ಬಝ್’ ಪ್ರಯುಕ್ತ ಪರಿಸರದೆಡೆಗೆ ನಮ್ಮ ನಡಿಗೆ ಧ್ಯೇಯವಾಕ್ಯದಡಿಯಲ್ಲಿ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ನೀರಿನ ಅತಿಬಳಕೆ, ಜಲಮಾಲಿನ್ಯ, ನೀರಿನ ಅವಶ್ಯಕತೆ, ಜಲಸಂರಕ್ಷಣೆ, ಮಿತಬಳಕೆಯ ಅನಿವಾರ್ಯತೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಬೀದಿನಾಟಕ ಮಾಡಿತು. ಜ್ವಲಂತ ಸಮಸ್ಯೆಗಳ ಕುರಿತಾಗಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಗಳನ್ನು ವೀಕ್ಷಕರಿಗೆ ವಿವರಿಸಿದ್ದು ಬೀದಿನಾಟಕವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿತು. ಜಲ ಸಂರಕ್ಷಣೆಗೆ ಕಂಕಣಬದ್ಧರಾಗಿರುತ್ತೇವೆಂದು ನೆರೆದ ವಿದ್ಯಾರ್ಥೀಗಳು ಹಾಗೂ ವೀಕ್ಷಕರಿಂದ ಪ್ರತಿಜ್ಞೆ ಮಾಡಿಸಲಾಯಿತು.

mbd_april12_5 (1)

mbd_april12_5 (2)

mbd_april12_5 (3)
ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಬೀದಿನಾಟಕದಲ್ಲಿ ಅಭಿನಯಿಸಿದ್ದು, ವಿಭಾಗದ ಮುಖ್ಯಸ್ಥೆ ಡಾ.ಮೌಲ್ಯ ಜೀವನ್‍ರಾಮ್ ಹಾಗೂ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಸುಧೀಂದ್ರ ಪರಿಕಲ್ಪನೆಯಲ್ಲಿ ಬೀದಿ ನಾಟಕ ಮೂಡಿತು.

By Suddi9

Leave a Reply

Your email address will not be published. Required fields are marked *