ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್ ಮೂಡುಬಿದಿರೆ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಮೂಡುಬಿದಿರೆ, ಓಂ ಶ್ರೀ ಅರ್ಧಾನಾರೀಶ್ವರ ಸೇವಾ ಟ್ರಸ್ಟ್, ಹೆಬ್ರಿ ಮತ್ತು ಶ್ರಿ ಸತ್ಯಸಾಯಿ ಸೇವಾ ಕ್ಷೇತ್ರ, ಹೆಬ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಭಾನುವಾರ ಹೆಬ್ರಿ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಜರುಗಿತು.

ಆಳ್ವಾಸ್ ಹೆಲ್ತ್ ಸೆಂಟರ್ ಆಡಳಿತ ಕಾರ್ಯನಿರ್ವಾಹಣಾ ಆಧಿಕಾರಿ ಡಾ.ವಿನಯ ಆಳ್ವ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿನಯಚಂದ್ರ ಶೆಟ್ಟಿ, ಓಂ ಶ್ರೀ ಅರ್ಧಾನಾರೀಶ್ವರ ಸೇವಾ ಸಮಿತಿಯ ಜಿಲ್ಲಾ ಅದ್ಯಕ್ಷ ಮೋಹನ್ ಆರ್ ಮೆಂಡನ್ ಸಂಚಾಲಕ ಸುರೇಶ್ ಕುಮಾರ್ ಶಿಬಿರದಲ್ಲಿ ಭಾಗವಹಿಸಿದರು
ನೂರಕ್ಕೂ ಅಧಿಕ ಮಂದಿ ಇ.ಸಿ.ಜಿ, ಹೃದಯ ತಪಾಸಣೆ ಮುಂತಾದ ಪರೀಕ್ಷೆ ಪ್ರಯೋಜನವನ್ನು ಪಡೆದುಕೊಂಡರು. ಅಗತ್ಯವಿದ್ದವರಿಗೆ ಔಷಧಿಯನ್ನು ಉಚಿತವಾಗಿ ನೀಡಲಾಯಿತು. ತಜ್ಞ ವೈದ್ಯರಾದ ಡಾ.ಸುಕೇಶ್, ಡಾ.ರವಿಪ್ರಸಾದ್ ಹೆಗ್ಡೆ, ಡಾ.ವಸಂತ್ ಶಿಬಿರವನ್ನು ನಡೆಸಿಕೊಟ್ಟರು.
