ಫರಂಗಿಪೇಟೆ : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಹೊರ ಠಾಣೆ ಗೆ ಪೊಲೀಸ್ ಬೀಟ್ ಸಮಿತಿ ಯನ್ನು ರಚಿಸಲಾಯಿತು . ೫೦ ಜನ ಸದಸ್ಯರನ್ನು ನೇಮಿಸಿ ಅವರಿಗೆ ಪೊಲೀಸಿಂಗ್ ವ್ಯವಸ್ಥೆ ಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ಮಾಹಿತಿ ಕೊಡುವ ಸಭೆಯನ್ನು ಫರಂಗಿಪೇಟೆ ಸೇವಾಂಜಲಿ ಸಭಾಂಗಣ ದಲ್ಲಿ ನಡೆಸಲಾಯಿತು .
ಬಂಟ್ವಾಳ ಸರ್ಕಲ್ ಇನಸ್ಪೆಕ್ಟರ್ ಮಂಜಯ್ಯ ಬಿ ಕೆ ಯವರು ಮಾತನಾಡಿ ತಮ್ಮ ವ್ಯಾಪ್ತಿ ಯಲ್ಲಿ ಯಾವುದೇ ಸಮಸ್ಯೆ ಅಥವಾ ಅಹಿತಕರ ಘಟನೆ ಗಳು ಸಂಭವಿಸಿದಲ್ಲಿ ಕೂಡಲೇ ಪೊಲೀಸ್ ಬೀಟ್ ನ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಅಲ್ಲದೆ ಪೊಲೀಸರು ಮಾಹಿತಿ ಕೇಳಿದಾಗ ಕೊಡುವುದು ಕೂಡ ತಮ್ಮ ಕರ್ತವ್ಯ ವಾಗಿರಿತ್ತದೆ.

_DSC0051
ಈಗಾಗಲೇ ಬಂಟ್ವಾಳ ಠಾಣಾ ವ್ಯಾಪ್ತಿ ಯಲ್ಲಿ ಬಂಟ್ವಾಳ ಕಸಬಾ , ಪಾಣೆ ಮಂಗಳೂರು , ಬಂಟ್ವಾಳ ನಗರ ಗಳಲ್ಲಿ ಸಮಿತಿ ರಚಿಸಿಕೊಂಡಿದ್ದು ಉತ್ತಮ ಸ್ಪಂದನೆ ದೊರಕುತಿದ್ದು ಈ ಯೋಜನೆ ಉಪಯುಕ್ತ ವಾಗಿದೆ ಎಂದು ನಾಗೇಶ್ ಐ ಪಿ ಎಸ್ ರವರು ತಿಳಿಸಿದರು ಬಂಟ್ವಾಳ ಗ್ರಾಮಾಂತರ ಠಾಣಾ ಎ ಎಸ್ ಐ ಭಾಸ್ಕರ್ , ಪೊಲೀಸ್ ಬೀಟ್ ಕಾನ್ಸ್ಟೇಬಲ್ ನಾಜಿರ್ ಉಪಸ್ಥಿತರಿದ್ದರು
ಸೇವಾಂಜಲಿ ಪ್ರತಿಷ್ಠಾನ ದ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ಭಾಸ್ಕರ ಚೌಟ , ಆನಂದ ಆಳ್ವ ಗರೋಡಿ , ನಾರಾಯಣ ಮೇರಮಜಲು , ಸಂತೋಷ್ ಗಾಂಭೀರ , ರಮ್ಲಾನ್ ಮಾರಿಪಳ್ಳ , ಲಕ್ಷ್ಮೀ ಕುಮುದೇಲು , ಅಖ್ತರ್ ಹುಸೈನ್ ಅಮೆಮಾರ್ , ಹನೀಫ್ ಕುಂಜತ್ಕಳ , ಪ್ರಕಾಶ್ ಕಿದೆಬೆಟ್ಟು , ದಿನೇಶ್ ಆರ್ ಶೆಟ್ಟಿ , ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು

By Suddi9

Leave a Reply

Your email address will not be published. Required fields are marked *