ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಬದ್ಯಾರುನಲ್ಲಿರುವ “ಬದ್ಯಾರು ಕೆರೆ” ಒಂದು ಕಾಲದಲ್ಲಿ ಬೇಸಿಗೆಯಲ್ಲಿ ಸಮೃದ್ಧ ನೀರು ಸಂಗ್ರಹವಿರುವ ಕೆರೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ಈ ಕೆರೆ ನೀರಿನಿಂದ ಪ್ರಯೋಜನವಾಗುತಿತ್ತು. ಪ್ರಸ್ತುತ ವರ್ಷದಲ್ಲಿ ಬದ್ಯಾರು ಕೆರೆಯಲ್ಲಿ ಹೂಳು ತುಂಬಿ, ಕಸ ಕಡ್ಡಿಗಳು ಸೇರಿ ನೀರು ಕಲುಷಿತಗೊಂಡಿದೆ. ಬದ್ಯಾರು ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಗಳು ಸ್ಥಳೀಯ ಕೃಷಿಕರಿಂದ ಕೇಳಿಬಂದಿದೆ.

3PN Kere 2

3PN Kere 4

ಇದೇ ನೀರಿನ ಮೂಲ
ಪ್ರಸ್ತುತ ಬಂಟ್ವಾಳ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲಾಗಿದ್ದು ಬಹುತೇಕ ಕಡೆಗಳಲ್ಲಿ ನೀರಿನ ಅಭಾವ ತಲೆದೋರಿದೆ. ಎಲಿಯನಡುಗೋಡು ಗ್ರಾಮದ ಬದ್ಯಾರುನಲ್ಲಿ ಇರುವ ಕೆರೆಯು ಸುಮಾರು ಒಂದೂವರೆ ಎಕರೆ ವಿಸ್ತೀರ್ಣದಲ್ಲಿದ್ದು ತಾಲೂಕಿನಲ್ಲಿ ಆತೀ ದೊಡ್ಡ ಕೆರೆಯಾಗಿದೆ. ಈ ಭಾಗದ ಸುತ್ತಮುತ್ತಲಿನ ಬಾವಿಗಳ ನೀರು ಆಳದಲ್ಲಿದೆ, ತೊರೆ ಸಂಪೂರ್ಣ ಬತ್ತಿಹೋಗಿದೆ. ಎಲ್ಲಿಯೂ ಬೇಸಿಗೆಗಾಲದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ಮೂಲಗಳಿಲ್ಲ. ಹೀಗಾಗಿ ಪ್ರಾಣಿ-ಪಕ್ಷಿಗಳಿಗೆ ಬದ್ಯಾರು ಕೆರೆಯೇ ನೀರಿನ ಮೂಲವಾಗಿದೆ.3PN Kere 1
* ಬದ್ಯಾರು ಕೆರೆಯ ಅಭಿವೃದ್ಧಿಗೆ ಆಗ್ರಹ
ಈ ಕೆರೆಯು ಸಂಪೂರ್ಣ ಹೂಳು ತುಂಬಿರುವುದರಿಂದ ನೀರು ಮಲಿನಗೊಂಡಿದೆ. ಈ ಹಿನ್ನಲೆಯಲ್ಲಿ ತುರ್ತಾಗಿ ಈ ಕೆರೆಯ ಹೂಳೆತ್ತುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ನಡೆಸಬೇಕು. ಕೆರೆಯ ಸುತ್ತಲೂ ತಡೆಗೋಡೆ ನಿರ್ಮಿಸಿ ಇದನ್ನು ರಕ್ಷಿಸುವ ಕಾರ್ಯವು ನಡೆಯಬೇಕಾಗಿದೆ. ತನ್ಮೂಲಕ ಭವಿಷ್ಯದ ದಿನಗಳಲ್ಲಿಯೂ ಈ ಕೆರೆಯ ನೀರನ್ನು ಸದ್ಬಳಕೆ ಮಾಡಬಹುದಾಗಿದೆ ಎಂಬ ಆಭಿಪ್ರಾಯ ಸ್ಥಳೀಯ ಕೃಷಿಕರದ್ದಾಗಿದೆ. ಬದ್ಯಾರು ಕೆರೆಯಲ್ಲಿ ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಸಂಗ್ರಹವಾದರೆ ಬೇಸಿಗೆಗಾಲದಲ್ಲಿ ಸುಮಾರು 60ಕ್ಕೂ ಅಧಿಕ ಕೃಷಿಕ ಕುಟುಂಬಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಕೃಷಿಕರು.
* ಕೆರೆ ಪುನಶ್ಚೇತನದಿಂದ ಆಗುವ ಪ್ರಯೋಜನಗಳು.
*ಕೆರೆಯಿಂದ ತಗ್ಗು ಪ್ರದೇಶದಲ್ಲಿ ಅಡಕೆ, ತೆಂಗು, ಭತ್ತ ಮುಂತಾದ ಕೃಷಿ ಚಟುವಟಿಗಳಿಗೆ ಪ್ರಯೋಜನವಾಗಲಿದೆ.
*ಗ್ರಾ.ಪಂ. ವ್ಯಾಪ್ತಿಯಲ್ಲಿನ ಮನೆಗಳಿಗೆ ನೀರಿನ ಪೂರೈಕೆ
*ಮಳೆಯ ನೀರು ಕೆರೆಯಲ್ಲಿ ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ.
*ಪ್ರಾಣಿ-ಪಕ್ಷಿಗಳಿಗೆ ಕೆರೆ ನೀರು ಮೂಲವಾಗುತ್ತದೆ.
ಬದ್ಯಾರು ಕೆರೆಯ ನೀರು ಗ್ರಾಮದ ಜನತೆಗೆ ಹೆಚ್ಚು ಪ್ರಯೋಜನವಾಗಲಿದೆ. ಪ್ರಾಣಿ-ಪಕ್ಷಿಗಳಿಗೂ ಕುಡಿಯಲು ನೀರು ಸಹ ಸಿಗುತ್ತದೆ.
ಪ್ರತಿಕ್ರಿಯೆ:
ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದ ಬದ್ಯಾರು ಕೆರೆ ಸುಮಾರು ಒಂದುವರೆ ಎಕರೆ ವಿಸ್ತೀರ್ಣವಿದ್ದು, ಈಗ ಹೂಳು ತುಂಬಿ ನೀರಿನ ಪ್ರಮಾಣ ಕಡಿಮೆಯಾಗಿದೆ.ಸಂಪೂರ್ಣ ಕೆರೆಯ ಹೂಳು ತೆಗೆದು ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಈ ಪ್ರದೇಶದ ಕೆರೆ ಅಭಿವೃದ್ಧಿಯಾದರೆ ಕೃಷಿಕರಿಗೆ ಅನುಕೂಲವಾಗಲಿದೆ. ಕೆರೆಯ ಕಾಯಕಲ್ಪ ನೀಡಲು ಕುಕ್ಕಿಪಾಡಿ ಗ್ರಾ.ಪಂ. ತಯಾರಿ ನಡೆಸಿದೆ ಹಾಗೂ ಅಭಿವೃದ್ಧಿ ಸೂಕ್ತ ಅನುದಾನದ ಕೊರತೆಯಿರುವುದರಿಂದ ಅನುದಾನ ಕುರಿತು ಸರಕಾರದ ಗಮನಕ್ಕೆ ತರಲಾಗಿದೆ.
-ದಿನೇಶ ಸುಂದರ ಶಾಂತಿ, ಅಧ್ಯಕ್ಷರು, ಕುಕ್ಕಿಪಾಡಿ ಗ್ರಾ.ಪಂ.3PN Kere 6-1

ಸಂತೋಷ್ ಕುಮಾರ್ ಭಂಡಾರಿ ಅವರು ಜಿ.ಪಂ.ಅಧ್ಯಕ್ಷರಾಗಿದ್ದ ಅವ„ಯಲ್ಲಿ ಕೆರೆಯನ್ನು ಹೂಳು ತೆಗೆದು ಪುನಶ್ಚೇತನಗೊಳಿಸಲಾಗಿತ್ತು. ತದನಂತರ ಯಾವುದೇ ಕಾಮಗಾರಿ ನಡೆಸಿಲ್ಲ. ಕೆರೆಯಲ್ಲಿನ ಸಂಪೂರ್ಣ ಹೂಳು ತೆಗೆದು ಸುತ್ತಲೂ ತಡೆಗೋಡೆ ಕಟ್ಟಿ ,ನೀರು ಸಂಗ್ರಹಿಸುವುದರಿಂದ ಕೃಷಿಗೆ, ಪ್ರಾಣಿ-ಪಕ್ಷಿಗಳಿಗೆ ವರದಾನವಾಗಲಿದೆ.ಕೆರೆಯ ಹೆಚ್ಚಿನ ಅಭಿವೃದ್ಧಿಗಾಗಿ ಸರಕಾರದ ಗಮನಕ್ಕೆ ತರಲಾಗುವುದು.
-ಪ್ರಭಾಕರ ಪ್ರಭು, ಸದಸ್ಯರು,ಬಂಟ್ವಾಳ ತಾ.ಪಂ.3PN Kere 5

By suddi9

Leave a Reply

Your email address will not be published. Required fields are marked *