ವಿಟ್ಲ :ಫೆ.14ರಂದು ನಿಧನರಾದ ವಿಟ್ಲ ವರ್ತಕರ ಸಂಘದ ಗೌರವಾಧ್ಯಕ್ಷರಾದ ಸೀತಾರಾಮ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆಯು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಮಿತಿ ಅಧ್ಯಕ್ಷ ಎಲ್ ಎನ್ ಕೂಡೂರು, ವರ್ತಕರ ಸಂಘದ ವತಿಯಿಂದ ಜಗನ್ನಾಥ ಸಾಲಿಯಾನ್, ಪಟ್ಟಣ ಪಂಚಾಯತ್ ವತಿಯಿಂದ ಅಧ್ಯಕ್ಷ ಅರುಣ್ ಎಂ ವಿಟ್ಲ, ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವಲಯ ಪೂರ್ವಾಧ್ಯಕ್ಷ ಇಕ್ಬಾಲ್, ವಿಟ್ಲ ಜೇಸಿಐ ವತಿಯಿಂದ ಬಾಬು ಕೆವಿ, ವಿಟ್ಲ ರೋಟರಿ ಕ್ಲಬ್ ವತಿಯಿಂದ ನಿಯೋಜಿತ ಅಧ್ಯಕ್ಷ ಸಂಜೀವ ಪೂಜಾರಿ ಎಂ, ವಿಟ್ಲ ಯೂತ್ ಬಿಲ್ಲವ ಸಂಘದ ವತಿಯಿಂದ ಅಧ್ಯಕ್ಷ ಚಂದ್ರಹಾಸ ಸುವರ್ಣ, ವಿಟ್ಲ ಅರಮನೆಯ ವತಿಯಿಂದ ಕೃಷ್ಣಯ್ಯ ಕೆ ಹಾಗೂ ಇತರರು ಶ್ರದ್ಧಾಂಜಲಿ ಅರ್ಪಿಸಿದರು.

SHV_9067

SHV_9071

By Suddi9

Leave a Reply

Your email address will not be published. Required fields are marked *