ಸಿದ್ದಕಟ್ಟೆ: ಮೂಡುಬಿದಿರೆ ರೋಟರಿ ಕ್ಲಬ್ ಪ್ರವರ್ತಿತ ಸಿದ್ಧಕಟ್ಟೆ ರೋಟರಿ ಸಮುದಾಯ ಗ್ರಾಮೀಣ ದಳ(ಆರ್‍ಸಿಸಿ)ಇದರ ವತಿಯಿಂದ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಅ.2 ರವಿವಾರ ರಾತ್ರಿ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ ಹಾಲ್‍ನಲ್ಲಿ ಜರಗಿತು.
ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಿದ್ಧಕಟ್ಟೆ ಸ.ಪ.ಪೂ.ಕಾಲೇಜು ಪ್ರೌಢ ಶಾಲಾ ವಿಭಾಗದ ಉಪಪ್ರಾಂಶುಪಾಲ ರಮಾನಂದ ಭಟ್ ಮತ್ತು ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರನ್ನು ಆರ್‍ಸಿಸಿ ಸಿದ್ಧಕಟ್ಟೆಯ ವತಿಯಿಂದ ಸಮ್ಮಾನಿಸಲಾಯಿತು.ಆರ್‍ಸಿಸಿ ಸಿದ್ದಕಟ್ಟೆ ಇದರ ಅಧ್ಯಕ್ಷ ಡಾ.ಕೃಷ್ಣ ಮೂರ್ತಿ ಅವರು ಅಧ್ಯಕ್ಷತೆ ವಹಿಸಿಮಾತನಾಡಿ ರೋಟರಿ ಸಮುದಾಯ ಗ್ರಾಮೀಣ ದಳದ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು ಸ್ಥಳೀಯವಾಗಿ ಸಾಧನೆಗೈದ ಸಾಧಕರ ಸೇವೆಯನ್ನು ಗುರುತಿಸಿ ಸಮ್ಮಾನಿಸುವ ಮೂಲಕ ಗೌರವಿಸುತ್ತಿದ್ದೇವೆ. ಇದರಿಂದ ಇತರರಿಗೂ ಉತ್ತಮ ಕಾರ್ಯ ನಡೆಸಲು ಪ್ರೇರಣೆಯಾಗುವುದು ಎಂದು ಹೇಳಿದರು.
ರೋಟರಿ ಕ್ಲಬ್ ಡಿಸ್ಟ್ರಿಕ್ಟ್ ವೈಸ್ ಚೆಯರ್‍ಮೇನ್ ರಾಮಣ್ಣ ರೈ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಉದ್ಧೇಶಿತ ಕಾರ್ಯಗಳ ಈಡೇರಿಕೆಗೆ ಪ್ರೋತ್ಸಾಹ ದೊರಕುವುದರ ಜೊತೆ ಶ್ರದ್ಧೆ,ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದಾಗ ಯಶಸ್ವಿ ನಾಯಕರಾಗಲು ಸಾಧ್ಯ ಎಂದರು. ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕ ರಮಾನಂದ ಅವರು ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವುದರಿಂದ ಮಕ್ಕಳ ಕ್ರಿಯಾಶೀಲತೆ ವೃದ್ಧಿಸುವುದು. ತಮ್ಮೂರ ಶಾಲೆಯನ್ನು ಊರವರು ನಮ್ಮ ಶಾಲೆಯೆಂದು ಭಾವಿಸಿ ಪ್ರೋತ್ಸಾಹಿಸಿದಾಗ ಬಡ ವಿದ್ಯಾರ್ಥಿಗಳ ಅಭಿವೃದ್ಧಿಗೆ ಅವಕಾಶವಾಗುವುದು ಎಂದು ಹೇಳಿದರು. ಪ್ರಭಾಕರ ಪ್ರಭು ಅವರು ಮಾತನಾಡಿ ಸಂಘ ಸಂಸ್ಥೆಗಳು ಎಷ್ಟು ಕಾರ್ಯಕ್ರಮ ನಡೆಸಿದೆ ಎಂಬ ಲೆಕ್ಕಾಚಾರಕ್ಕಿಂತ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದೆ ಎಂಬುವುದು ಮುಖ್ಯ. ಈ ನಿಟ್ಟಿನಲ್ಲಿ ರೋಟರಿ ಗ್ರಾಮೀಣ ದಳದ ಕಾರ್ಯ ಶ್ಲಾಘನೀಯ ಎಂದರು.
ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಶರೀಫ್,ಆರ್‍ಸಿಸಿ ಸಿದ್ಧಕಟ್ಟೆ ಕ್ಲಬ್ ಚೇರ್‍ಮೆನ್ ರೋ|ಶ್ರೀನಾಥ್ ಭಟ್ ವೇದಿಕೆಯಲ್ಲಿದ್ದರು. ಸಿದ್ದಕಟ್ಟೆ ರೋಟರಿ ಸಮುದಾಯ ಗ್ರಾಮೀಣ ದಳದ ಪದಾ„ಕಾರಿಗಳು,ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತ್ಯ„ಕ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು. ಸ್ಥಾಪಕ ಸದಸ್ಯ ಮೈಕಲ್ ಡಿಕೋಸ್ತ ಅವರನ್ನು ಗೌರವಿಸಲಾಯಿತು. ಭರತ್ ಕುಮಾರ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಜೆರಾಲ್ಡ್ ಡಿಕೋಸ್ತ ವರದಿ ವಾಚಿಸಿದರು.ವಾಸುದೇವ ಆಚಾರ್ಯ ವಂದಿಸಿದರು.ಶಿಕ್ಷಕ ವಿನಯಚಂದ್ರ ಕಾರ್ಯಕ್ರಮ ನಿರೂಪಿಸಿದರು.
