ಕೈಕಂಬ: ಹಸಿವು, ಬಡತನ, ಅನಕ್ಷರತೆ ಹೋಗಲಾಡಿಸಲು ಸಾಕ್ಷರತೆ ಮುಖ್ಯ. ಹೆತ್ತವರುಅನಕ್ಷರಸ್ಥರಾಗಿದ್ದರೆ ನಾವು ಮಕ್ಕಳು ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಸಪ್ಟೆಂಬರ್ 8ನ್ನು ಸಾಕ್ಷರತೆ ದಿನವನ್ನಾಗಿ ನಮ್ಮ ಶಾಲೆಯಲ್ಲಿಔಚಿತ್ಯವಾಗಿಆಚರಿಸುವುದು ಸಂತೋಷದ ವಿಷಯ.ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್.ಎ.ಯು ಮಕ್ಕಳ ಪೋಷಕತ್ವವನ್ನುತೆಗೆದುಕೊಂಡು ಮಕ್ಕಳಿಗೆ ಶಿಕ್ಷಣದ ಜೊತೆಗೆ ಪೋಷಕರಿಗೆಜೀವನಅವಶ್ಯಕವನ್ನು ಒದಗಿಸಿ ಉಪಕಾರ ಮಾಡಿಅವರನ್ನು ಪ್ರೀತಿಯಿಂದ ನೋಡಿ ಕೊಳ್ಳುತ್ತದೆ.ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿ ಪೋಷಕತ್ವವನ್ನು ಪಡೆದಂತಹ ವ್ಯಕ್ತಿಗಳಿಗೆ ಗೌರವವನ್ನುಕೊಟ್ಟು ನಾವು ಋಣಿಯಾಗಿಇರಬೇಕುಎಂದು ತಿಳಿಸಿದರು. ಕಾರ್ಯಕ್ರಮವನ್ನು ಮಂಗಳ ಜ್ಯೋತಿ ಸಮಗ್ರ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ್‍ಕುಮಾರ್ ಶೆಟ್ಟಿ ಉದ್ಘಾಟಿಸಿದರು
ಅವರು ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ.ವಾಮಂಜೂರು ಇದರ ವತಿಯಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಸೆ. 10 ರಂದು ಶನಿವಾರ ಮಂಗಳ ಜ್ಯೋತಿಯ ಪಾರ್ವತಿ ಬಾಬು ಶೆಟ್ಟಿಸಭಾಂಗಣದಲ್ಲಿ ನಡೆಸಲಾಯಿತು.???????????????????????????????

???????????????????????????????

???????????????????????????????

???????????????????????????????

???????????????????????????????

 

ಮುಖ್ಯಅತಿಥಿಯಾದ ಕನ್ನಡ ಶಿಕ್ಷಕರಾದ ರಮೇಶ್ ಆಚಾರ್ಯ ಸಾಕ್ಷರತೆಯ ಬಗ್ಗೆ ಮನುಷ್ಯಜನ್ಮ ಅಪರೂಪ. ಮನುಷ್ಯ ಪರಿವರ್ತನೆ, ಬದಲಾವಣೆ ಆಗಬೇಕಾದರೆ ಪೂರಕವಾದ ಶಿಕ್ಷಣ ಬೇಕು.ಇತ್ತೀಚೆಗೂ ಕೆಲವರು ವಿದ್ಯೆಯಿಂದ ವಂಚಿತರಾಗಿದ್ದಾರೆ.21ನೇ ಶತಮಾನದಲ್ಲಿದ್ದರೂ ಪ್ರಪಂಚದಾದ್ಯಂತಅನಕ್ಷರಸ್ಥರು ಹಲವು ಮಂದಿ ಇದ್ದಾರೆ.ಶಿಕ್ಷಣದ ಅರಿವು ಮೂಡಿಸಲು 50 ವರ್ಷಗಳಿಂದ ಸಾಕ್ಷರತೆ ದಿನ ಎಂದು ಆಚರಿಸಿಕೊಂಡು ಬಂದಿದೆ.ತಾವುಕಲಿಯುವುದರಜೊತೆಗೆಇನ್ನೊಬ್ಬರಿಗೆ ಕಲಿಸುವುದನ್ನುರೂಡಿ ಮಾಡಿಕೊಂಡರೆ ಈ ಸಮಾಜದಲ್ಲಿ ಪ್ರತಿಯೊಬ್ಬರೂ ಸಾಕ್ಷರತೆಯನ್ನು ಹೊಂದುವುದರಲ್ಲಿ ಸಂದೇಹ ಇಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು.ಎಸ್. ಎ. ಇದರಯೋಜನಾಧಿಕಾರಿಯಾದ ಶ್ರೀಯುತ ಪುನೀತ್ ಡಿ. ಶೆಟ್ಟಿಅಧ್ಯಕ್ಷತೆಯನ್ನುವಹಿಸಿ ಮಾತನಾಡುತ್ತಾ ಸಮಾಜ ಮತ್ತು ಸಮುದಾಯಗಳಿಗೆ ಸಾಕ್ಷರತೆಯ ಪ್ರಾಮುಖ್ಯತೆಯನ್ನು ತಿಳಿಸಲು, ಮಾನವನಅಭಿವೃದ್ಧಿಗೆ ಪೂರಕವಾಗಿರುವಂತಹ ಹಕ್ಕುಗಳನ್ನು ತಿಳಿಯಲು, ಶಿಶು ಮರಣದ ಪ್ರಮಾಣವನ್ನುಕಡಿಮೆ ಮಾಡಲು, ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸಲು, ಲಿಂಗ ಸಮಾನತೆಯನ್ನು ಸಾಧಿಸಲು, ಶಿಕ್ಷಣವನ್ನು ಪಡೆಯುವಂತವರಿಗೆ ಪ್ರೋತ್ಸಾಹಿಸಲು ತನ್ನಕುಟುಂಬ, ಸಮಾಜ ಮತ್ತುದೇಶಕ್ಕೆತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಸಾಕ್ಷರತಾ ದಿನವನ್ನುಆಚರಿಸಲಾಗುತ್ತಿದೆಎಂದು ತಿಳಿಸಿದರು.

ವೇದಿಕೆಯಲ್ಲಿ ದಿಗಂತಯುವಕ ಸಂಘದಅಧ್ಯಕ್ಷರಾದಶ್ರೀ ಪ್ರತೋಷ್, ಕಾರ್ಯದರ್ಶಿ ಕುಮಾರಿ ಅಶ್ವಿನಿ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ – “ಸ್ವಚ್ಚ ಬರಹ ಸ್ಪಷ್ಟಓದು”ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲ ಮಕ್ಕಳಿಗೆ ನೋಟ್ ಪುಸ್ತಕವನ್ನುವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಕ್ಷರತೆಗೆ ಸಂಬಂಧ ಪಟ್ಟ ಕಿರು ಪಾತ್ರಾಭಿನಯವನ್ನು ಸಮಾಜ ಕಾರ್ಯ ವಿದ್ಯಾರ್ಥಿಗಳು ಮಾಡಿದರು. ಸಂಸ್ಥೆಯ ಕಾರ್ಯಕ್ರಮ ಸಂಯೋಜಕಿಯಾದ ರಮ್ಯಾ ಸ್ವಾಗತಿಸಿ, ಕುಮಾರಿ ಮೇಘ ಜೆ.ನಿರೂಪಿಸಿ, ಹರೀಶ್ ಕುಲಶೇಖರ ವಂದಿಸಿ, ಲೀಲಾವತಿ ಸಹಕರಿಸಿದದರು.

By Suddi9

Leave a Reply

Your email address will not be published. Required fields are marked *