ಬಂಟ್ವಾಳ : ತಾಲೂಕು ಸಣ್ಣ ಮತ್ತು ದೊಡ್ಡ ಟೆಂಪೋ ಚಾಲಕರ ಮತ್ತು ಮಾಲಕರ ಮಹಾಸಭೆಯು ದಿನಾಂಕ:15-08-2016 ರಂದು ಬಿ.ಸಿ.ರೋಡ್ ರಕ್ತೇ ಶ್ವರೀ ದೇವಿ ಸನ್ನಿಧಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರಮಾನಾಥ ಕಾರಂದೂರು ರವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಮಿಕ ಮುಂದಾಳು ಎಂ.ಕೆ.ಖಾದರ್ ಮತ್ತು ಪುರಭಾ ನಾವi ನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

KAR_0721
ಸಭೆಯಲ್ಲಿ ಗತವರ್ಷದ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದಿಸಲಾಯಿತು ಹಾಗೂ 2016-17 ವರ್ಷದ ಪದಾಧಿಕಾರಿಗಳನ್ನಾಗಿ ಸರ್ವಾನುಮತದಿಂದ ಆರಿಸಲಾಯಿತು. ಅಧ್ಯಕ್ಷರಾಗಿ ನ್ಯಾಯವಾದಿ ರಮಾನಾಥ ಕಾರಂದೂರು, ಉಪಾಧ್ಯಕ್ಷ ಪದ್ಮನಾಭ ಪೂಜಾರಿ, ಕಾರ್ಯದರ್ಶಿ ಇಗ್ನೇಶಿಯಸ್ ತೌರೊ, ಜತೆ ಕಾರ್ಯದರ್ಶಿ ನಾರಾಯಣ ಕುಲಾಲ್, ಕೋಶಾಧಿಕಾರಿ ಲತೀ ಫ್ ಬಿ.ಸಿ.ರೋಡ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾರಾಯಣ ದಾಸ್, ನಝೀರ್, ಜಯ, ವಿಠಲಪೂಜಾರಿ, ರವಿ, ಹುಸೆನಬ್ಬ, ಮೋಹನ್, ಜಗ ದೀಶ್, ರಮೇಶ್, ವರದರಾಜ್, ಸದಾನಂದ, ಸುರೇಶ್ ಗೌಡ, ಸತೀಶ್, ವಿಶ್ವನಾಥ, ಮೆಲ್ವಿನ್ ಡಿಸೋಜ, ಶೇಖರ್, ಮಹಮ್ಮದ್ ಇಸ್ಮಾಯಿಲ್, ಕೃಷ್ಣಪ್ಪ, ಲೂಯಿಸ್ ಮೊಂತೆರೋ, ಅಬ್ಬಾಸ್ ಕಲ್ಲಡ್ಕ , ಚಂದ್ರಹಾಸ್, ದಾಮೋದರ್, ಸತೀಶ್, ಹಮೀದ್, ಅರುಣ್ ರವರನ್ನು ಆಯ್ಕೆ ಮಾಡಲಾಯಿತು.

By Suddi9

Leave a Reply

Your email address will not be published. Required fields are marked *