ಮೂಡುಬಿದಿರೆ: 70ನೇ ವರ್ಷದ ಸ್ವಾತಂತ್ರೋತ್ಸವವನ್ನು ಕೊಡ್ಯಡ್ಕ ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜು, ಅಲ್‍ಫುರ್ಖಾನ್ ವಿದ್ಯಾಸಂಸ್ಥೆ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಸಹಿತ ವಿವಿಧ ಸಂಘ ಸಂಸ್ಥೆಗಳು ಸಂಭ್ರಮದಿಂದ ಆಚರಿಸಿದವು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವು ಶ್ರೀ ಮಹಾವೀರ ಕಾಲೇಜು ಬಳಿಯ ಕೀರ್ತಿನಗರದಲ್ಲಿರುವ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಪಬ್ಲಿಕ್ ಪಾರ್ಕ್‍ನಲ್ಲಿ ಸೋಮವಾರ ನಡೆಯಿತು.
ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಪಿ.ಎಂ ಧ್ವಜವನ್ನರಳಿಸಿ ಶುಭ ಹಾರೈಸಿದರು. ನಂತರ ಧವಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಹಾಗೂ ಜೈನ ಪಿ.ಯೂ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಪಾರ್ಕ್‍ನಲ್ಲಿ ಗಿಡ ನೆಡುವ ಮೂಲಕ ವನ ಮಹೋತ್ಸವವನ್ನು ಆಚರಿಸಲಾಯಿತು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‍ನ ಅಧ್ಯಕ್ಷ ರಾಜೇಶ್ ಬಂಗೇರಾ, ಕಾರ್ಯದರ್ಶಿ ಹರೀಶ್, ಸ್ಥಾಪಕಾಧ್ಯಕ್ಷ ಯುವರಾಜ್ ಜೈನ್, ಮಾಜಿ ಅಧ್ಯಕ್ಷ ಉಮೇಶ್ ರಾವ್ ಹಾಗೂ ಸದಸ್ಯರು ಈ ಸಂದರ್ಭದಲ್ಲಿದ್ದರು. 70ನೇ ವರ್ಷದ ಸ್ವಾತಂತ್ರೋತ್ಸವದ ಪ್ರಯುಕ್ತ ಅಲ್‍ಫುರ್ಖಾನ್ ವಿದ್ಯಾಸಂಸ್ಥೆಯಲ್ಲಿ ಉದ್ಯಮಿ ಮುಹಮ್ಮದ್ ಅಶ್ರಫ್ ಧ್ವಜಾರೋಹಣಗೈದರು.
ಅಲ್‍ಫುರ್ಖಾನ್: ಅರೆಬಿಕ್ ವಿಭಾಗದ ಮುಖ್ಯಸ್ಥ ತೌಸೀಫ್ ಉಮ್ರಿ ಅಬ್ದುಲ್ ಹಲೀಮ್ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮಾತನಾಡಿದರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.mdb_aug16_2 (1)

mdb_aug16_2(a) (1)

ರಫೀಕ್ ತೀರ್ಥಹಳ್ಳಿ, ಟ್ರಸ್ಟಿಗಳಾದ ಮುಹಮ್ಮದ್ ಅಶ್ಫ್‍ಕ್, ಮುಹಮ್ಮದ್ ಶಹಾಮ್, ನೂರ್ ಮುಹಮ್ಮದ್ ಅತಿಥಿಗಳಾಗಿದ್ದರು. ವಿಧ್ಯಾರ್ಥಿ ನಾಯಕ ಅಬ್ದುಲ್ ಮನ್ನಾನ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಸಫ್ವಾನ್ ಸ್ವಾಗತಿಸಿದರು. ಮುಹಮ್ಮದ್ ಆಮೀನ್ ವಂದಿಸಿದರು.
ಯೆನೆಪೋಯ ಕಾಲೇಜು: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ರಾಕೇಶ್ ಡಿ’ಸೋಜಾ ಧ್ವಜ ಅರಳಿಸಿದರು. ಕಾಲೇಜಿನ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್, ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.
ಕೊಡ್ಯಡ್ಕ: ಕೊಡ್ಯಡ್ಕ ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ವಿಜಯ ಬ್ಯಾಂಕ್‍ನ ನಿವೃತ್ತ ಪ್ರಬಂಧಕ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಕೋಶಾಧಿಕಾರಿ ಭವನಪ್ರಸಾದ ಹೆಗ್ಡೆ ಧ್ವಜ ಅರಳಿಸಿದರು. ದೇವಕಿ ಶೆಟ್ಟಿ, ವೈಭವ್ ಹೆಗ್ಡೆ ಉಪಸ್ಥಿತರಿದ್ದರು.
ಗುಡ್ಡೆಯಂಗಡಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶಿಕ್ಷಕರು, ದೇವಸ್ಥಾನದ ಭಕ್ತರು, ಸಿಬ್ಬಂದಿಗಳು ಪಾಲ್ಗೊಂಡರು.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

By Suddi9

Leave a Reply

Your email address will not be published. Required fields are marked *