ಕೈಕಂಬ:ಅವರ್ ಲೇಡಿ ಆಫ್ ಪೊಂಪೈಆಂಗ್ಲ ಮಾಧ್ಯಮ ಶಾಲೆ ಕೈಕಂಬ ಇದರ ವತಿಯಿಂದ 70ನೇ ಸ್ವಾತಂತ್ರ್ಯೋತ್ಸವದ ದ್ವಜಾರೋಹಣವನ್ನು ಶಾಲಾ ಮೆನೇಜಿಂಗ್ ಟ್ರಸ್ಟಿಗಳಾದ ಸ್ಟೀಫನ್ ಮೆಂಡಿಸರು ನೆರವೇರಿಸಿದರು.ಶಾಲಾ ಸಂಚಾಲಕಿ ಪೋರೆನ್ಸ್ ಮೆಂಡಿಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಮೋಹಿನಿ, ಮಾಜಿ ಅಧ್ಯಕ್ಷ ಸುದೇಶ್ ಕುಮಾರ್, ಎಲ್ಲ ಸದಸ್ಯರು, ಮುಖ್ಯ ಶಿಕ್ಷಕರು ,ಸಹಶಿಕ್ಷಕರು, ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮೇನೇಜಿಂಗ್ ಟ್ರಸ್ಟಿ ಸ್ಟೀಫನ್ ಮೆಂಡಿಸರು ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಪಿ.ರಾಮಕೃಷ್ಣ ಭಟ್ಟ, ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡೀಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಸರು, ಮಾಜಿ ಅಧ್ಯಕ್ಷರು, ಮುಖ್ಯ ಶಿಕ್ಷಕರು ಮತ್ತು ಶಾಲಾ ನಾಯಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಮಹೇಶ್ ಶೆಟ್ಟಿ ಸ್ವಾಗತಿಸಿ,ಶಿಕ್ಷಕಿ ನತಲಿಯಾ ಆಲಿಸ್ ವಂದಿಸಿದರು. ವರ್ಣನ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರು, ಅತಿಥಿಗಳು, ಶಾಲಾ ಸಂಚಾಲಕಿ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದರು. ನಂತರ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
