ಸಿದ್ಧಕಟ್ಟೆ:ರಂಜನೆ, ಮಾಹಿತಿಗಾಗಿ ಇಂದು ಹಲವು ಮಾಧ್ಯಮಗಳು ಇವೆ. ಆದರೆ ಇವು ಯಾವುದೂ ಪುಸ್ತಕಕ್ಕೆ ಪರ್ಯಾಯವಲ್ಲ. ಓದು ಎಂಬುದು ಒಂದು ಬಗೆಯ ಸುಖ ಪಯಾಣ. ಅರಿವು ಹಾಗೂ ಕಲ್ಪನಾ ಸಮರ್ಥವನ್ನು ವೃದ್ಧಿಸುತ್ತ್ತದೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕನ್ನಡ ಉಪಾನ್ಯಾಸಕ ಡಾ ಯೋಗಿಸ್ ಕೈರೋಡಿ ತಿಳಿಸಿದ್ದರು.

ಅವರು ನಿತ್ಯಾನಂದ ಶೆಟ್ಟಿ ಮಾವಿನಕಟ್ಟೆ (ನಿತ್ಯ ರತ್ನಗಿರಿ) ಯವರ ಸಿದ್ಧಕಟ್ಟೆಯಲ್ಲಿ ನಡೆದ ಮೌನಗೌರಿಯ ಮೌನರಾಗ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತಾನಾಡಿದ್ದರು.
ಸುತ್ತಲಿನ ಸಮಾಜ ಮತ್ತು ನಿಸರ್ಗವನ್ನು ಬೆರಗು ಕಣ್ಣಿನಿಂದ ನೋಡಬೇಕು. ಇತರರ ಬರಹಗಳನ್ನು ಓದುತ್ತಾ ಬರಹ ಬಲಗೊಳುತ್ತ್ತದೆ ಎಂದರು.

ಕೃತಿ ಬಿಡುಗಡೆ ಮಾಡಿದ ಸಿದ್ಧಕಟ್ಟೆ ರೋಟರಿ ಸಮುದಾಯಗಳ ಅಧ್ಯಕ್ಷ ವೈದ್ಯ ಡಾ ಕೃಷ್ಣಮೂರ್ತಿ ಮಾತಾನಾಡಿ ಒಳ್ಳೆಯ ಹವ್ಯಾಸಗಳು ಆರೋಗ್ಯಕರ ವ್ಯಕ್ತಿ ಹಾಗೂ ಸಮಾಜವನ್ನು ರೂಪಿಸುತ್ತ್ತದೆ ಎಂದರು. ನಿವೃತ್ತ ಕಂದಾಯ ಅಧಿಕಾರಿ, ಹವ್ಯಾಸಿ ಜಲ ತಜ್ಞ ಭೋಜ.ಕೆ ಶುಭ ಹಾರೈಸಿದರು. ಕವಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕೊಲ ಸಹಕರಿಸಿದರು.

ನಿತ್ಯ ಎಸ್ ರತ್ನಗಿರಿ ಮಾವಿನಕಟ್ಟೆ,
ಸಿದ್ಧಕಟ್ಟೆ

By Suddi9

Leave a Reply

Your email address will not be published. Required fields are marked *