ಸ್ತ್ರೀಯರಲ್ಲಿ ಒಗ್ಗಟ್ಟಿನ ಜಾಗೃತಿ ಮೂಡಿಸಿದ ಮಹಿಳೋತ್ಸವ
ಮುಂಬಯಿ: ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಮಂಗಳವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿವಿಜೃಂಭನೆಯಿಂದ ಜಾಗತಿಕ ಮಹಿಳಾ ದಿನಾಚರಣೆ ಸಂಭ್ರಮಿಸಿತು. ಸಂಘದ ಅಧ್ಯಕ್ಷಕರ್ನಿರೆ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಭ್ರಮಿಸಿದ ಜಾಗತಿಕ ಮಹಿಳಾ ದಿನಾಚರಣೆಯಲ್ಲಿ ಮಹಾರಾಷ್ಟ್ರ ಸರಕಾರದ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಿನ್ಸಿಪಾಲ್ ಕಾರ್ಯದರ್ಶಿ ಸುಜತಾ ಸೌನಿಕ್ (ಐಎಎಸ್), ಗೌರವ ಅತಿಥಿಯಾಗಿ ಎಸ್‍ಎನ್‍ಡಿಟಿ ಮಹಿಳಾ ವಿಶ್ವವಿದ್ಯಾಲಯ ಮುಂಬಯಿ ಇದರ ಪೂರ್ವ ಪದವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ| ಡಾ| ವಿಭುತಿ ಪಾಟೇಲ್, ವಿಶೇಷ ಅತಿಥಿಯಾಗಿ ಚಿತ್ರನಟಿ ಕು| ಅವಂತಿಕಾ ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಮಮತಾ ಎಂ.ಶೆಟ್ಟಿ, ಗೌ| ಕಾರ್ಯದರ್ಶಿ ಕವಿತಾ ಐ.ಆರ್ ಶೆಟ್ಟಿ, ಗೌ| ಕೋಶಾಧಿಕಾರಿ ಆಶಾ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ಆಶಾ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಶಾಂತಿ ಡಿ.ಶೆಟ್ಟಿಉಪಸ್ಥಿತರಿದ್ದರು. ಕು| ಅಸ್ಮಿತಾ ಚಂದ್ರಹಾಸ ರೈ ಅವರ ಗಣೇಶವಂದನೆಯೊಂದಿಗೆ ಮಹಿಳೋತ್ಸವ ಸಂಭ್ರಮ ಆದಿಗೊಂಡಿತು. ಬಳಿಕ ಬಂಟ್ಸ್ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗ ಹಾಗೂ ಯುವ ವಿಭಾಗಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ಪದಾಧಿಕಾರಿಗಳು ಅತಿಥಿಗಳನ್ನು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳ ತಂಡಗಳನ್ನು ಮತ್ತು ಹಾಗೂ ಪ್ರಾಯೋಜಕರನ್ನು ಅಭಿವಂದಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘದ ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ.ಶೆಟ್ಟಿ ಸೇರಿದಂತೆ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಮತ್ತಿತರ ಗಣ್ಯ ಮಹಾನೀಯರು ಉಪಸ್ಥಿತರಿದ್ದರು. ಸುಚಿತ್ರಾ ಕೆ.ಶೆಟ್ಟಿ ಅವರ ಪ್ರಾರ್ಥೆನೆಯೊಂದಿಗೆ ಮಹಿಳಾ ದಿನಾಚರಣಾ ಸಂಭ್ರಮ ಆದಿಗೊಂಡಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಮತ್ತು ಡಾ| ವಿಜೇತ ಶೆಟ್ಟಿಕಾರ್ಯಕ್ರಮ ನಿರೂಪಣೆಗೈದರು.ಕವಿತಾ ಐ.ಆರ್ ಶೆಟ್ಟಿವಂದನಾರ್ಪಣೆಗೈದರು.




















