ಮುಂಬಯಿ: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ 49ನೇ ವಾರ್ಷಿಕೋತ್ಸವದ ಅಂಗವಾಗಿ ಇಂದಿಲ್ಲಿ ರವಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವು ನೇರವೇರಿಸಿತು. ಸಭಾಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ನ್ಯಾಯವಾದಿ ಸೀತರಾಮ ಶೆಟ್ಟಿ, ಉದ್ಯಮಿ ಪ್ರಕಾಶ್ ಮೂಡಬಿದ್ರಿ ಉಪಸ್ಥಿತರಿದ್ದರು.
ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಜೆ.ಬಂಗೇರ, ವಿಶ್ವಸ್ಥ ಸದಸ್ಯ ನಾರಾಯಣ ಜಿ.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ನಾಗೇಶ್‍ಜಿ.ಸುವರ್ಣ,ಮಹಿಳಾ ಮಂಡಳಿಯ ಕೇಸರಿ ಬಿ.ಅಮೀನ್ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷಶಂಕರ ಡಿ.ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಕುಂತಳಾ ಕೆ.ಕೋಟ್ಯಾನ್, ಭಾರತೀ ನಿಟ್ಟೆಕರ್, ಎಂ.ಎಸ್ ರಾವ್ ಚಾರ್ಕೋಪ್ ಮತ್ತುಶ್ಯಾಮರಾಜ್ ಶೆಟ್ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

Shanishwara Khar Cultural-13

Shanishwara Khar Cultural-A2
Shanishwara Khar Cultural-1

Shanishwara Khar Cultural-2

Shanishwara Khar Cultural-3

Shanishwara Khar Cultural-4

Shanishwara Khar Cultural-5

 

Shanishwara Khar Cultural-6

Shanishwara Khar Cultural-11

Shanishwara Khar Cultural-7

Shanishwara Khar Cultural-9

Shanishwara Khar Cultural-11

Shanishwara Khar Cultural-12ಕಾರ್ಯಕ್ರಮದಲ್ಲಿ ಆದಿಯಲ್ಲಿಸಮಿತಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಅಪಾರ ಸೇವೆಸಲ್ಲಿಸಿ ಆರ್ಚಕರಾಗಿದ್ದು ಕಳೆದ ಶನಿವಾರ ಸ್ವರ್ಗಸ್ಥರಾದ ಭೋಜ ಬಾಬು ಸುವರ್ಣ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷದೇವೇಂದ್ರ ವಿ.ಬಂಗೇರ, ಜೊತೆ ಸಹಾಯಕ ಕಾರ್ಯದರ್ಶಿಗಳಾದ ಸಿ.ಎನ್ ಶೆಟ್ಟಿ, ರಮೇಶ್ ಎನ್.ಪೂಜಾರಿ, ಜಯರಾಮ ಶೆಟ್ಟಿ, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜ್ಮಾಡಿ, ಕಾರ್ಯಾಧ್ಯಕ್ಷ ಆರ್.ಡಿ ಕೋಟ್ಯಾನ್, ಮಹಿಳಾ ಮಂಡಳಿಯ ಜಂಟಿ ಸಂಘಟನಾ ಕಾರ್ಯದರ್ಶಿ ಶೋಭಾ ವಿ.ಕೋಟ್ಯಾನ್, ವಿಶ್ವಸ್ಥ ಮಂಡಳಿ ಸದಸ್ಯರುಗಳಾದ ವಾಸು ಪಿ.ಶೆಟ್ಟಿ, ವಾಸು ಎಸ್.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಶೋಭಾ ಪೂಜಾರಿ ಪ್ರಾರ್ಥನೆಯನ್ನಾಡಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೆಶ್ ಕೆ.ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿಯ ಹರೀಶ್ ಶೆಟ್ಟಿವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮಿತಿ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಇವರಿಂದ `ದೇವುಪೂಂಜ ಪ್ರತಾಪ’ ತುಳು ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.

By Suddi9

Leave a Reply

Your email address will not be published. Required fields are marked *