ಮುಂಬಯಿ: ಡಿ.09: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ 84ನೇ ಶಾಖೆಯನ್ನು ಡಿ. 9ರಂದು ಬುಧವಾರ ಬೆಳಿಗ್ಗೆ ಕುರ್ಲ ಪೂರ್ವದ ನೆಹರೂ ನಗರದಲ್ಲಿನ ಸೂರ್ಯಮುಖಿ ಕಟ್ಟಡದಲ್ಲಿ ಶುಭಾರಂಭ ಗೊಂಡಿತು . ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ರಿಬ್ಬನ್ ಕತ್ತರಿಸಿ ನೂತನ ಶಾಖೆಯನ್ನು ಉದ್ಘಾಟಿಸಿದರು.

ಬಿಲ್ಲವರ ಅಸೋಸಿಯೇಶನ್ ಇದರ ವಿಕ್ರೋಲಿ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ರಾಘವ ಕೆ.ಕುಂದರ್ ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಗೆ ಚಾಲನೆಯನ್ನಿತ್ತರು. ಬ್ಯಾಂಕ್ನ ಉಪ ಕಾರ್ಯಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಉನ್ನತಿಗೆ ಶುಭಕೋರಿದರು.
ಗೌರಹ್ವಾನಿತ ಅತಿಥಿಗಳಾಗಿ ಮಾತೃಭೂಮಿ ಕೋ.ಆಪರೇಟಿವ್ ಕ್ರೇಡಿಟ್ ಸೊಸೈಟಿ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಗೌರವ ಕಾರ್ಯದರ್ಶಿ ಜಯರಾಮ ಎ.ಶೆಟ್ಟಿ, ಉದ್ಯಮಿಗಳಾದ ಕಾಂತಿಲಾಲ್ ಗೋಗ್ರಿ, ರಜನಿ ಮಂಗೇಶ್ ಕುಡಲ್ಕರ್ (ಕುರ್ಲ ವಿಧಾನಸಭಾ ಕ್ಷೇತ್ರದ ಶಾಸಕ ಮಂಗೇಶ್ ಕುಡಲ್ಕರ್ ಅವರ ಪತ್ನಿ), ಶೈಲೇಶ್ ಚೌಭೆ, ವರ್ಧಮಾನ್ ಸಿಂಘ್ವಿ, ಅನಿವಾಸಿ ಭಾರತೀಯ ಗ್ರಾಹಕಿ ಸುಜತಾ ವಿರೇಂದ್ರ ಗೈಧಾನೆ ಉಪಸ್ಥಿತರಿದ್ದರು.
ಭಾರತ್ ಬ್ಯಾಂಕ್ನ ಗ್ರಾಹಕರೆಲ್ಲರೂ ಲಕ್ಕೀ ಜನರಾಗಿದ್ದಾರೆ. ರಾಷ್ಟ್ರದ ಬ್ಯಾಂಕಿಂಗ್ ಸೇವೆಗಾಗಿ ಮತದಾನ ನಡೆಸಿದರೆ ನಮ್ಮ ಹಿತವನ್ನು ಬಯಸುವ ಭಾರತ್ ಬ್ಯಾಂಕ್ಗೆನೇ ನಮ್ಮ ಮತವಾಗಿರುತ್ತದೆ. ಕಾರಣ ಹಣಕಾಸು ವ್ಯವಹಾರಕ್ಕೆ ಭರವಸೆಯ ಬ್ಯಾಂಕ್ ಇದಾಗಿದ್ದು, ವಿಶ್ವಾಸನೀಯ ಹಣಕಾಸು ಕೇಂದ್ರ ಎಂದೇ ಜನಜನಿತವಾಗಿದೆ. ರಾಷ್ಟ್ರೀಯ ಮತ್ತು ವಿದೇಶಿಯ ಬ್ಯಾಂಕ್ಗಳಿಕ್ಕಿಂತ ತ್ವರಿತ ಸೇವೆ ಇಲ್ಲಿ ಸಿಗುತ್ತದೆ. ಎದೆಷ್ಟೋ ಬ್ಯಾಂಕ್ಗಳು ಉದಯಿಸಿದರೂ ನಮಗೆ ಮಾತ್ರ ಭಾರತ್ ಬ್ಯಾಂಕ್ವೊಂದೇ ಭದ್ರವಾದ ಬ್ಯಾಂಕ್ ಆಗಲಿದೆ ಎಂದು ರತ್ನಾಕರ್ ಮುಂಡ್ಕೂರು ಶುಭಾರೈಸಿದರು.
ಭಾರತ್ ಬ್ಯಾಂಕ್ನ ಸೇವೆ ಭಾರತ್ ರಾಷ್ಟ್ರದಷ್ಟೇ ವಿಶಾಲವೂ ಮಿತ್ರತ್ವದಿಂದ ಕೂಡಿದೆ. ಆದುದರಿಂದ ಇದರ ಪ್ರಸಾರಣಕ್ಕೆ ಸಮಯ ತಾಗುವುದಿಲ್ಲ. ಜಯ ಸುವರ್ಣರ ಅವಿರತ ಶ್ರಮದಿಂದ ಬ್ಯಾಂಕ್ ಮುನ್ನಡೆದು ಗ್ರಾಹಕರನ್ನೂ ಮುನ್ನಡೆಸುತ್ತಿದೆ. ಮಾತೃಭೂಮಿ ಸೊಸೈಟಿ ಮತ್ತು ಭಾರತ್ ಬ್ಯಾಂಕ್ ಸಹೋದರತ್ವದ ಸಂಬಂಧ ಹೊಂದಿದ್ದು ಭವಿಷ್ಯತ್ತಿನುದ್ದಕ್ಕೂ ಇಂತಹದ್ದೇ ಮಿತ್ರತ್ವದ ನಡೆ ಮುನ್ನಡೆಯಲಿ ಎಂದು ಜಯರಾಮ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.
ನಾನೋರ್ವ ಜೈನ್ ಸಮುದಾಯದವನಾಗಿದ್ದು ನಿಮ್ಮೆಲ್ಲರಿಗೂ ಜೈ ಜಿನೇಂದ್ರನ ಕೃಪೆಯನ್ನು ಹಾರೈಸುವೆ. ಸದಾ ಸಮೃದ್ಧಿಯ ಹರ್ಷವನ್ನೀಡುವ ಸೇವೆಯ ಈ ಬ್ಯಾಂಕ್ನ ಸೇವೆ ಮತ್ಯಾವುದೇ ಬ್ಯಾಂಕ್ಗಳಲ್ಲಿ ಕಾಣಸಿಗದು. ಆದುದರಿಂದಲೇ ನಾನು ಈ ಬ್ಯಾಂಕ್ನ ಸಾವಿರಾರು ಇತರೇ ಗ್ರಾಹಕರಿಗೆ ಪರಿಚಯಿಸಿ ಜವಾಬ್ದಾರಿಯ ಸಹಿ ಹಾಕಿರುವೆ. ಸೀಮಾ ಅವರೇ ಸದ್ಯ ಈ ಶಾಖೆಯ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವ ಹಿಸುತ್ತಿದ್ದು, ಅವರ ಮುಂಚೂಣಿಯಲ್ಲಿ ತಮ್ಮ ಸಂಭಾವ್ಯತೆಗೂ ಮೀರಿದ ವ್ಯವಹಾರದ ಸೀಮಾ ಮೀರಿಸುವಂತಾಗಲಿ ಎಂದು ಕಾಂತಿಲಾಲ್ ಗೋಗ್ರಿ ಶುಭೇಚ್ಛ ಕೋರಿದರು.
ಗೌರವ್ವಾನಿತ ಮಹಾನೀಯರುಗಳಾಗಿ ಮನೀಷ್ ಪೂಜಾರಿ, ನರಸಿಂಹ ಶೆಟ್ಟಿ, ಬೀನಾ ಕುಂದರ್, ವಿನೋದ್ ತಿವಾರಿ, ದತ್ತಾತ್ರೇಯ ಎಂ.ಶಿಂಧೆ, ಶೀತಲ್ ಎಂ.ಶಿಂಧೆ, ವಿಕಾಸ್ ಕರಾಂಡೆ, ದೇವರಾಜ್ ಪೂಜಾರಿ ಡೊಂಬಿವಿಲಿ, ನೆಹರೂ ನಗರ್ನ ಸಿನೀಯರ್ ಇನ್ಸ್ಪೆಕ್ಟರ್ ರಾಜೇಂದ್ರ ಜಿಲೆ, ಕಿಸನ್ ಮದನ್, ಸುಂದರ್ ಹೆಗ್ಡೆ, ವಿ.ಕೆ ಕೋಟ್ಯಾನ್, ಧರ್ಮೇಂದ್ರ ಮಾನೆ, ತೋನ್ಸೆ ಸಂಜೀವ ಪೂಜಾರಿ ಮತ್ತು ಸ್ಥಳಿಯ ನೂತನ ಗ್ರಾಹಕರು, ನೂರಾರು ಹಿತೈಷಿಗಳು ಉಪಸ್ಥಿತರಿದ್ದು ಶಾಖೆಯ ಸರ್ವೊನ್ನತಿಗೆ ಶುಭ ಹಾರೈಸಿದರು.
ಜಯ ಸುವರ್ಣ ರೋಹಿಣಿ ಸಾಲ್ಯಾನ್, ಪುಷ್ಫಲತಾ ಸಾಲ್ಯಾನ್ ಮತ್ತು ಕೆ.ಎನ್ ಸುವರ್ಣ ಅವರು ಕ್ರಮವಾಗಿ ರತ್ನಾಕರ್ ಶೆಟ್ಟಿ ಮುಂಡ್ಕೂರು, ರಜನಿ ಮಂಗೇಶ್ ಕುಡಲ್ಕರ್, ಜಯರಾಮ ಎ.ಶೆಟ್ಟಿ ಮತ್ತು ಸುಜತಾ ಗೈಧಾನೆ ಅವರನ್ನು ಶಾಲು ಹೊದೆಸಿ ಫಲಪುಷ್ಪಗಲನ್ನಿತ್ತು ಗೌರವಿಸಿದರು. ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ನಿರ್ದೇಶಕರುಗಳಾದ ಜ್ಯೋತಿ ಕೆ.ಸುವರ್ಣ, ಜೆ.ಎ ಕೋಟ್ಯಾನ್, ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್. ಪೂಜಾರಿ, ಹರೀಶ್ಚಂದ್ರ ಜಿ.ಮೂಲ್ಕಿ, ಆರ್.ಡಿ ಪೂಜಾರಿ, ಸಿ.ಟಿ ಸಾಲ್ಯಾನ್, ಅಶೋಕ್ ಎಂ. ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಮಾಜಿ ನಿರ್ದೇಶಕ ಎನ್.ಎಂ ಸನೀಲ್ ಅವರು ಶಾಖೆಯ ಮುಖ್ಯಸ್ಥೆ ಸೀಮಾ ಗಣೇಶ್ ಪೂಜಾರಿ, ಸಹಾಯಕ ಪ್ರಬಂಧಕ ಮಹೇಶ್ ಎಲ್.ಕುಕ್ಯಾನ್ ಮತ್ತು ಉದ್ಯೋಗಸ್ಥ ಮಂಡಳಿಯ ಕಿರಣ್ ಎ.ಬಂಗೇರ, ಕರುಣಾಕರ್ ಬಿ.ಅಂಚನ್, ರತ್ನಾ ನಂದು ಬೋಕಂ, ಸೋನಲ್ ಎಸ್.ಕೋಟ್ಯಾನ್, ಸಂತೋಷ್ ಕೆ.ಮುಂಧೆ ಅವರಿಗೆ ಪುಷ್ಫಗುಪ್ಚವನ್ನೀಡಿ ಗೌರಸಿದರು.
ಬ್ಯಾಂಕ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಅನಿಲ್ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕರುಗಳಾದ ಶೋಭಾ ದಯಾನಂದ್, ನಿತ್ಯಾನಂದ್ ಡಿ.ಕೋಟ್ಯಾನ್, ಉಪ ಪ್ರಧಾನ ಪ್ರಬಂಧಕರುಗಳಾದ ಸುರೇಶ್ ಎಸ್.ಸಾಲ್ಯಾನ್, ವಿಶ್ವನಾಥ್ ಜಿ.ಸುವರ್ಣ, ದಿನೇಶ್ ಬಿ.ಸಾಲ್ಯಾನ್, ವಿದ್ಯಾನಂದ ಎಸ್.ಕರ್ಕೇರ, ಪ್ರಭಾಕರ್ ಜಿ.ಸುವರ್ಣ, ರಮೇಶ್ ಹೆಚ್.ಪೂಜಾರಿ, ಇತರೇ ಶಾಖೆಗಳ ಮುಖ್ಯಸ್ಥರುಗಳಾದ ರತ್ನಾಕರ್ ಆರ್.ಸಾಲ್ಯಾನ್, ಮಂಜುಳಾ ಎನ್.ಸುವರ್ಣ, ಬ್ಯಾಂಕ್ನ ಅಭಿವೃದ್ಧಿ ಇಲಾಖಾಧಿಕಾರಿಗಳಾದ ಸುನೀಲ್ ಗುಜರನ್, ವಿಜಯ ಪಾಲನ್, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ ಮತ್ತು ವಿವಿಧ ಶಾಖೆಗಳ ಮುಖ್ಯಸ್ಥರು ಹಾಜರಿದ್ದು ಶಾಖೆಯ ಪ್ರಗತಿಗೆ ಶುಭಕೋರಿದರು.
ಉಳ್ಳೂರು ಶೇಖರ ಶಾಂತಿ, ಉಳ್ಳೂರು ಧನಂಜಯ್ ಶಾಂತಿ ಮತ್ತು ಉಳ್ಳೂರು ದಿನೇಶ್ ಶಾಂತಿ ವಾಸ್ತುಪೂಜೆ, ಗಣಹೋಮ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಕರುಣಾಕರ್ ಬಿ.ಅಂಚನ್, ಹಾಗೂ ರತ್ನಾ ನಂದು ಬೋಕಂ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ಸೀಮಾ ಗಣೇಶ್ ಪೂಜಾರಿ ಸ್ವಾಗತಿಸಿದರು. ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಬ್ಯಾಂಕ್ನ ಸೇವಾ ವೈಖರಿ, ಕಾರ್ಯ ನಿರ್ವಹಣೆ, ಪುರಸ್ಕಾರಗಳ ಮಾಹಿತಿಯನ್ನಿತ್ತು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮಹೇಶ್ ಎಲ್.ಕುಕ್ಯಾನ್ ಧನ್ಯವದಿಸಿದರು.












