ಬಂಟ್ವಾಳ: ನೇತ್ರಾವತಿ ನದಿ ಬರಡುಗೊಳಿಸಿ ರಾಜಕಾರಣಿಗಳು ಹಣ ಮಾಡುವುದಕ್ಕಾಗಿ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನ ಹೊಳೆ ಯೋಜನೆ ಕೈಬಿಡುವಂತೆ ಆಗ್ರಹಿಸಿ ಬಂಟ್ವಾಳ ತಾಲ್ಲೂಕು ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ಬಂಟ್ವಾಳ ಪುರಸಭೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಈ ನೇತ್ರಾವತಿ ನದಿಯ ಎರಡೂ ಬದಿ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ಗಳಿದ್ದು ಧಾರ್ಮಿಕವಾಗಿ ಭಾವನಾತ್ಮಕ ಸಂಬಂಧ ಹೊಂದಿದೆ. ಜಾನುವಾರು ಮತ್ತು ಕೃಷಿ ಜೊತೆಗೆ ಕುಡಿಯುವ ನೀರನ್ನು ಇಡೀ ಜಿಲ್ಲೆ ಅವಲಂಬಿಸಿದೆ.

ಈ ಬಗ್ಗೆ ಕಿಂಚಿತ್ತೂ ಪರಾಮರ್ಶಿಸದೆ ಅವೈಜ್ಞಾನಿಕ ಯೋಜನೆ ಕೈಗೊಂಡಿರುವ ಬಗ್ಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಸಮರ್ಪಕ ಮಾಹಿತಿ ನೀಡುವ ಅವಶ್ಯಕತೆ ಎದುರಾಗಿದೆ. ಇದಕ್ಕಾಗಿ ಸರ್ಕಾರ ಎಚ್ಚೆತ್ತು ಇಂತಹ ಮೂರ್ಖತನದ ಯೋಜನೆ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ, ಪ್ರಮುಖರಾದ ಪಿ.ಎ. ರಹೀಂ, ರಾಜ ಚಂಡ್ತಿಮಾರ್, ಇಬ್ರಾಹಿಂ ಕೈಲಾರ್, ರಾಮಚಂದ್ರ ಸುವರ್ಣ ಕಾಯೆರ್ಮಾರ್, ಆಯೂಬ್ ಗೂಡಿನಬಳಿ ಮತ್ತಿತರು ಪಾಲ್ಗೊಂಡಿದ್ದರು.
ಇದೇ 6ರಂದು ಬೆಳಿಗ್ಗೆ 10 ಗಂಟೆಗೆ ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಎದುರು ಪ್ರತಿಬಟನೆ ನಡೆಸುವುದಾಗಿ ಸಮಿತಿ ಸದಸ್ಯ ಬಿ.ಎಂ.ಪ್ರಭಾಕರ ದೈವಗುಡ್ಡೆ ಪ್ರಕಟಿಸಿದರು.

By Suddi9

Leave a Reply

Your email address will not be published. Required fields are marked *