“ಸ್ವಸ್ಥ ಸಮಾಜಕ್ಕೆ ನಾವೆಲ್ಲ ರಕ್ತದಾನಿಗಳಾಗೋಣ”-ಕೊಂಡೆವೂರು ಶ್ರೀಗಳು
ಮುಂಬಯಿ: ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ‘ಜಗದ್ಗುರು ಶ್ರೀ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್’ ನೇತೃತ್ವದಲ್ಲಿ, ಎ.ಜೆ. ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಎ.ಜೆ.ವೈದ್ಯಕೀಯ ಮಹಾವಿದ್ಯಾಲಯ ಕುಂಟಿಕಾನ ಮಂಗಳೂರು ಸಹಯೋಗದೊಂದಿಗೆ “ರಕ್ತದಾನ ಶಿಬಿರ”ವು ಸೆ.13ರಂದು ಭಾನುವಾರ ನಡೆಯಿತು. 3 ಸ್ತ್ರೀಯರು, 68 ಪುರುಷರು ಹೀಗೆ ಒಟ್ಟು 71 ಮಂದಿ ರಕ್ತದಾನ ಮಾಡಿ ಪುಣ್ಯಭಾಜನರಾದರು.
DSC_1121

DSC_1177

DSC_1207

DSC_1214

DSC_1215

DSC_1221ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ರಕ್ತದಾನ ಮಾಡಲು ಬಂದ ಕಾರ್ಯಕರ್ತರನ್ನು ಮತ್ತು ಎ.ಜೆ. ಸಂಸ್ಥೆಯ ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿದರು. ರಕ್ತದ ಅಗತ್ಯವಿರುವವರಿಗೆ ರಕ್ತ ಒದಗಿಸಲು ಆಗಾಗ್ಗೆ ಶಿಬಿರ ನಡೆಸಬೇಕೆಂದು ಆಗ್ರಹ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಬಾಲಕೃಷ್ಣ ರೈ ಬಾನೊಟ್ಟು ಇವರು ‘ರಕ್ತದಾನ ಮಾಡಲು ಬಂದ ವ್ಯಕ್ತಿಗಳು ಶ್ರೇಷ್ಠರು, ರಕ್ತದಾನ ಮಾಡಿ ಜೀವ ಉಳಿಸೋಣ’ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಎಂ.ಕೆ. ಆಲಿ ಮಾಸ್ತರ್, ಶ್ರೀ ಚಂದ್ರಹಾಸ್ ಪಂಡಿತ್ ಹೌಸ್, ಎ.ಜೆ.ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮೇಲ್ವಿಚಾರಕ ಶ್ರೀ ಗೋಪಾಲಕೃಷ್ಣ, ಡಾ/ ಧನಂಜಯ ಹಂದೆ, ಶ್ರೀ ರವೀಂದ್ರ ರೈ ಹರೇಕಳ, ಎ.ಜೆ. ಆಸ್ಪತ್ರೆಯ ಆಡಳಿತಾಧಿಕಾರಿ ಶ್ರೀ ಲಕ್ಷ್ಮೀಶ ರೈ, ಶ್ರೀ ಗೋಪಾಲ ಬಂದ್ಯೋಡು, ಶ್ರೀ ಪಿ. ಆರ್. ಶೆಟ್ಟಿ ಪೊಯ್ಯೇಲು, ಇವರುಗಳು ‘ರಕ್ತದಾನದ ಪುಣ್ಯದ ಕೆಲಸವನ್ನು ಆಶ್ರಮದಂತಹ ಧಾರ್ಮಿಕ ಕೇಂದ್ರ ನಡೆಸುತ್ತಿರುವುದು ಬಹಳ ಸಂತಸದ ವಿಚಾರ, ರಕ್ತದಾನ ಮಾಡಿ ಜೀವದಾನ ಮಾಡೋಣ’ ಎಂದು ಅಭಿಪ್ರಾಯ ಪಟ್ಟರು. ಶ್ರೀ ಸುಧಾಮರವರ ಪ್ರಾರ್ಥನೆಯೊಂದಿಗೆ, ಶ್ರೀ ಸುಧಾಕರ ಮಾಸ್ತರ್ ಸ್ವಾಗತಿಸಿ, ಶ್ರೀ ಜಯಪ್ರಕಾಶ್ ಸಂತಡ್ಕ ವಂದಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಾಮಚಂದ್ರ ಬಲ್ಲಾಲ್ ನೆರವೇರಿಸಿದರು.

By Suddi9

Leave a Reply

Your email address will not be published. Required fields are marked *