ಬಂಟ್ವಾಳ: ಸದಾ ಬಂದೋಬಸ್ತುವಿನಲ್ಲಿ ನಿರತರಾಗುತ್ತಿರುವ ಪೋಲೀಸ್ ಸಿಬ್ಬಂದಿಗಳು ಭಾನುವಾರ ಕೊಂಚ ವಿರಾಮತೆಗೆದುಗೊಂಡು ಇಲಾಖಾ ವತಿಯಿಂದ ರಕ್ತದಾನ ಶಿಬಿರ ಏರ್ಪಡಿಸಿಕೊಂಡು ಖುದ್ದು ತಾವೇ ರಕ್ತದಾನ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದರು. ಕೋಮು ಸೌಹಾರ್ದತೆಯ ಪ್ರಯುಕ್ತ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣಾ ಪೋಲಿಸರು ಬಿಸಿರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು.
ಸಾರ್ವಜನಿಕರು ಸ್ಥಳೀಯ ಪರ್ತಕರ್ತರು ಕೂಡಾ ಈ ಶಿಬಿರದಲ್ಲಿ ಪಾಲ್ಗೊಂಡರು . ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ , ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಸಹಭಾಗಿತ್ವ ನೀಡಿತ್ತು. ಬಂಟ್ವಾಳ ಉಪವಿಭಾಗ ಎ.ಎಸ್.ಪಿ.ರಾಹುಲ್ ಕುಮಾರ್, ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಎಸ್.ಐ ನಂದಕುಮಾರ್, ರಕ್ಷಿತ್ ರಕ್ತದಾನಹ ಮಾಡಿದರು.
ಎರಡು ಠಾಣೆಯ ಮಹಿಳಾ ಸಿಬ್ಬಂದಿಗಳು ಸಹಿತ ಕಾನ್ಸಟೇಬಲ್ , ಹೆಡ್ ಕಾನ್ಸ್‍ಟೇಬಲ್‍ಗಳು ಉತ್ಸಾಹದಿಂದ ಪಾಲ್ಗೋಂಡು ರಕ್ತದಾನ ಮಾಡಿದರು. ಸೇವಾಂಜಲಿ ಪ್ರತಿಷ್ಟಾನದ ಕೃಷ್ಣ ಕುಮಾರ್ ಪೂಂಜಾ, ಜಿಲ್ಲಾ ಕಾರ್ಯನಿರತ ಪರ್ತಕರ್ತ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಸದಾನಂದ ಶೆಟ್ಟಿ ರಂಗೋಲಿ ಮೊದಲಾದವರಿದ್ದರು.
