ಬಂಟ್ವಾಳ: ವಿಟ್ಲ ಮೇಗಿನಪೇಟೆ ಅಂಗನವಾಡಿ ಕೇಂದ್ರದಲ್ಲಿ ವಿಟ್ಲ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್, ಸ್ತ್ರೀ ಶಕ್ತಿ ಗುಂಪುಗಳು ಮತ್ತು ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ, ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಬೇದಿಯ ತೀವ್ರತರ ನಿಯಂತ್ರಣ ಪ್ರಾಕ್ಷಿಕ ಆಚರಣೆ 2015 ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ತಾ ಪಂ ಸದಸ್ಯೆ ಜುಲಿಯಾನ ಮೇರಿ ಲೋಬೊ ಉದ್ಘಾಟಿಸಿದರು. ಸ್ತನ್ಯಪಾನದ ಮಾಹಿತಿಯನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಹಿರಿಯ ಆರೋಗ್ಯ ಮೇಲ್ವಿಚಾರಿ ಶಶಿಕಲಾ ಪಿ ಕೆ ನೀಡಿದರು. ಅತಿಥಿಗಳಾಗಿ ಲಯನೆಸ್ ಕ್ಲಬ್ ಅಧ್ಯಕ್ಷೆ ಲೀಲಾವತಿ, ಕೋಶಾಧಿಕಾರಿ ಭಾರತಿ ಪ್ರಕಾಶ್ ಮತ್ತು ಲಕ್ಷ್ಮೀ ಕೃಷ್ಣಪ್ಪ ಭಾಗವಹಿಸಿದ್ದರು. ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷೆ ಜಯಂತಿ ಪಿರುಷೋತ್ತಮ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ನಿರೂಪಿಸಿ ವಂದಿಸಿದರು.

