ಬಂಟ್ವಾಳ : ಸೇವಾಂಜಲಿ ಪ್ರತಿಷ್ಟಾನ ವತಿಯಿಂದ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆ ಸದಸ್ಯರಾದ ನೆತ್ತರಕೆರೆ ಲೋಕಯ್ಯ ಪೂಜಾರಿಯವರು ನಿಧನರಾಗಿದ್ದು , ವಿಮಾ ಪರಿಹಾರವಾಗಿ ರೂ.31,000(ಮೂವತ್ತೊಂದು)ವನ್ನು ಮೃತರ ಪತ್ನಿ ಭಾರತಿ ನೆತ್ತರಕೆರೆಯವರಿಗೆ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆಯ ನೇತ್ರತಜ್ಞರಾದ ಡಾ.ಜಯರಾಮ್ ಶೆಟ್ಟಿಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೇವಾಂಜಲಿಯ ಭಾಸ್ಕರ್ ಚೌಟ ಕುಮ್ಡೇಲು, ಪುಂಚಮೆ ಪದ್ಮನಾಭ ಶೆಟ್ಟಿ , ಪದ್ಮನಾಭ ಕಿದೆಬೆಟ್ಟು , ಸುಕುಮಾರ್ ಅರ್ಕುಳ, ಪ್ರಶಾಂತ್ ಕುಮಾರ್ ತುಂಬೆ , ಬಾಲಕೃಷ್ಣ ರೈ ದೇವಸ್ಯ, ಮೋಹನ್ ಬೆಂಜನಪದವು, ವಸಂತಿ ರಾಮಲ್ ಕಟ್ಟೆ , ಯಮುನಾ ನರಿಕೊಂಬು, ಶ್ರೀಮತಿ ತನು ಮತ್ತು ಆಡಳಿತ ಟ್ರಸ್ಟೀ ಕೃಷ್ಣ ಕುಮಾರ್ ಪೂಂಜ ಉಪಸ್ಥಿತರಿದ್ದರು.
