ಬಂಟ್ವಾಳ: ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 2013-14ನೇ ಸಾಲಿನ ‘ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ’ ಪ್ರಶಸ್ತಿಯನ್ನು ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಘಟಕವು ಪಡೆದುಕೊಂಡಿದೆ. ನಂದಕಿಶೋರ್ ಹಾಗೂ ರೊನಾಲ್ಡ್ ಪ್ರವೀಣ್ ಕೊರೆಯಾ ಅವರು ಯೋಜನಾಧಿಕಾರಿಗಳಾಗಿಸಹಕರಿಸಿದ್ದರು. ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ. ಗಿರೀಶ್ ಭಟ್, ಕುಲಸಚಿವರಾದ ಡಾ. ಪಿ.ಎಸ್. ಎಡಪಡಿತ್ತಾಯರಿಂದ ಪ್ರಶಸ್ತಿ ಸ್ವೀಕರಿಸಿದರು.
