ಬಂಟ್ವಾಳ: ಬಸ್ಸಿನಿಂದ ಇಳಿಯುವ ಸಂದರ್ಭ ಬಸ್ಸು ಚಲಾಯಿಸಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ಘಟನೆ ಅಮ್ಟಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಮ್ಟಾಡಿ ಗ್ರಾಮದ ಮೈರ ನಿವಾಸಿ ಸಂಜೀವ ಆಚಾರ್ಯ(48) ನಿಧನರಾಧವರಾಗಿದ್ದಾರೆ. ಜು.18ರಂದು ನಿರುಮಾರ್ಗ ಎಂಬಲ್ಲಿಂದ ಹಿಂದಿರುಗುತ್ತಿದ್ದಸಂದರ್ಭ ಖಾಸಗೀ ಬಸ್ಸಿನಿಂದ ನಲಿಕೆಮಾರು ಎಂಬಲ್ಲಿ ಇಳಿಯುವ ಸಂದರ್ಭ ಬಸ್ಸಿನಿಂದ ಎಸೆಯಲ್ಪಟ್ಟಿದ್ದರು. ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ನಿಧನರಾಗಿದ್ದು, ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಸಹೋದರ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *