ಬಂಟ್ವಾಳ: ಬೇಕು ಬೇಡಗಳ ಮದ್ಯೆ ಮೇಲ್ಕಾರ್ನಲ್ಲಿ ಆರಂಭವಾದ ಟ್ರಾಫಿಕ್ ಪೋಲಿಸ್ ಠಾಣೆಗೆ ಸರಕಾರ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ. ಹಾಗಾಗಿ ಇಲ್ಲಿನ ಪೋಲಿಸರು ಕೆಲಸ ಮಾಡುವಲ್ಲಿ ತೊಡಕುಂಟಾಗುತ್ತಿದೆ ಎನ್ನಲಾಗುತ್ತಿದೆ. ಬೇಡಿಕೆಗೆ ಬೇಕಾಗುವಷ್ಟು ನೇಮಕಾತಿ ಮತ್ತು ವಾಹನದ ಪ್ರಾಮುಖ್ಯತೆ ಅತಿಯಾಗಿ ಕಾಡುತ್ತಿದೆ. ಅತೀ ಅಗತ್ಯವಿರುವ ಕೆಲವು ವ್ಯವಸ್ಥೆಗಳನ್ನಾದರೂ ಮಾಡಿಯೇ ಸ್ಟೇಷನ್ ಉದ್ಘಾಟನೆ ಮಾಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಟ್ರಾಫಿಕ್ ಪೋಲಿಸ್ ಠಾಣೆ ಆರಂಭವಾಗಿಯೂ ಕೂಡಾ ಟ್ರಾಫಿಕ್ ಕಿರಿ ಕಿರಿ ಇನ್ನು ಕೂಡಾ ತಪ್ಪಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು. ಆದರೆ ಸಾಕಷ್ಟು ಸಿಬ್ಬಂದಿಗಳು ಇಲ್ಲ ಬೇಕಾಗುವ ಪೂರಕ ವ್ಯವಸ್ಥೆಗಳು ಇಲ್ಲ ಎನ್ನುವ ಸತ್ಯ ಯಾರಿಗೂ ತಿಳಿದಿಲ್ಲ.


ಬಹುವರ್ಷಗಳ ಬೇಡಿಕೆಯಾಗಿದ್ದ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾಗಿ ಮೆಲ್ಕಾರ್ ನ ತಾತ್ಕಾಲಿಕ ಕಟ್ಟಡದಲ್ಲಿ ಉದ್ಘಾಟನೆಯೂ ನಡೆದಿದೆ. ಆದರೆ ವಾರವೊಂದು ಕಳೆದರೂ ಇಲ್ಲಿನ ಮೂಲಬೂತ ಅಗತ್ಯಗಳೇ ಈಡೇರಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ಬೆಳೆಯುತ್ತಿರುವ ಬಿ.ಸಿ.ರೋಡಿಗೆ ಅತೀ ಅಗತ್ಯವೆನ್ನಿಸಿದ್ದ ಟ್ರಾಫಿಕ್ ಪೊಲೀಸ್ ಠಾಣೆ ಯ ಮಂಜೂರಾತಿ ಹಿಂದೆ ಬಂಟ್ವಾಳ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಪರಿಶ್ರಮ ಇದೆ ಎನ್ನುವುದು ಸತ್ಯವಾದರೂ, ನೂತನ ಪೊಲೀಸ್ ಠಾಣೆಗೆ ಇನ್ನೂ ಸೂಕ್ತ ಸೌಲಭ್ಯಗಳ ದೊರಕದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಬಿ.ಸಿ.ರೋಡಿನಲ್ಲಿ ಆಗಬೇಕಿದ್ದ ಟ್ರಾಪಿಕ್ ಸ್ಟೇಷನ್ನನ್ನು ಮೆಲ್ಕಾರನಲ್ಲಿ ಮಾಡಿ ಇನ್ನಷ್ಟು ಕಿರಿಕಿರಿ ಆಗುತ್ತಿದೆ ಎನ್ನುತ್ತಿದ್ದಾರೆ. ಅಗತ್ಯವಾಗಿ ಬಿ.ಸಿ.ರೋಡಿಗೆ ಬೇಕಾಗಿರುವ ಇಲಾಖೆಯನ್ನು ಮತ್ತೆ ಇಲ್ಲಿಗೆ ವರ್ಗಾಯಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.
ಸಂಚಾರಿ ಉಪನಿರೀಕ್ಷ ಸೇರಿದಂತೆ 12 ಸಿಬ್ಬಂದಿಗಳ ನೇಮಕದ ಕುರಿತಾಗಿ ಮಂಜೂರು ಆದೇಶದಲ್ಲಿ ಉಲ್ಲೇಖಿಸಲ್ಪಟ್ಟಿದ್ದರೂ ಸದ್ಯಕ್ಕೆ ಇಲ್ಲಿ ಕರ್ತವ್ಯದಲ್ಲಿರುವ ಹನ್ನೆರಡೂ ಮಂದಿಯೂ ಒಒಡಿ ಯಂತೆ ಓಡಿ ಬಂದ ವಲಸಿಗರು.ಈಗ ಕರ್ತವ್ಯದಲ್ಲಿರುವಂತೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕ ಚಂದ್ರಶೇಖರಯ್ಯ ಪ್ರಭಾರ ಸಂಚಾರಿ ಉಪನಿರೀಕ್ಷಕರಾಗಿದ್ದರೆ, ಪುತ್ತೂರಿನಿಂದ 1, ಬೆಳ್ತಂಗಡಿ ಯಿಂದ 3, ಪೂಂಜಾಲಕಟ್ಟೆ 1, ಅಬಕಾರಿ ಮತ್ತು ಲಾಟರಿ ಜಾರಿಗೆ ದಳದಿಂದ 3,ಡಿಸಿಆರ್ ಬಿ ಯಿಂದ 1, ಡಿಸಿಐಬಿ ಯಿಂದ 1 ವೇಣೂರು ಠಾಣೆಯಿಂದ ಒಬ್ಬರನ್ನು ನಿಯೋಜಿಸಲಾಗಿದೆ. ಹೀಗಾಗಿ ವಲಸೆ ಸಿಬ್ಬಂದಿಗಳಿಂದಲೇ ನೂತನ ಠಾಣೆಯನ್ನು ಭರ್ತಿ ಮಾಡ ಹೊರಟಂತಿದೆ ಇಲಾಖೆ. ಇನ್ನೂ ತಮಾಷೆಯ ಸಂಗತಿಯೆಂದರೆ ಇರುವವರೇ 12 ಅದರಲ್ಲಿ ಇಬ್ಬರು ಸಿಬ್ಬಂದಿಗಳನ್ನು ಪುತ್ತೂರು ಜಾತ್ರಾ ಬಮದೋಬಸ್ತ್ ಗೆ ನಿಯೋಜಿಸಿರುವುದು.
ಇನ್ನು ಠಾಣೆಗೆ ಅಗತ್ಯವಿರುವ ವಾಹನಗಳು ಸೇರಿದಂತೆ ಕಛೇರಿಯೊಳಗಿನ ಕಂಪ್ಯೂಟರ್, ಅಗತ್ಯದ ಪೀಠೋಪಕರಣಗಳು ಇನ್ನು ಇಲ್ಲಿ ಕಾಣಸಿಗುತ್ತಿಲ್ಲ. ಸಾಮಾನ್ಯವಾಗಿ ಒಂದು ಟ್ರಾಫಿಕ್ ಠಾಣೆಗೆ 2 ಬೈಕ್, ಒಂದು ಇಂಟರ್ ಸೆಫ್ಟರ್ ಹಾಗೂ ಒಂದು ಜೀಪಿನ ಅಗತ್ಯತೆ ಇದೆ. ಆದರೆ ಈ ನೂತನ ಠಾಣೆಯಲ್ಲಿ ಸದ್ಯಕ್ಕೆ ವಾಗಹನಗಳೇ ಇಲ್ಲ. ಹಾಗಾಗಿ ಇಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಗಳು ನಗರ ಠಾಣೆಯ ಜೀಪು, ಇಂಟರಗ ಸೆಫ್ಟರ್ ಅಥವಾ ತಮ್ಮದೇ ಖಾಸಗಿ ಬೈಕನ್ನು ಆಶ್ರಹಿಸಬೇಕಾಗಿದೆ. 43 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಈ ಠಾಣೆಗೆ ವಾಹನಗಳ ಅಗತ್ಯತೆ ತುರ್ತು ಅಗತ್ಯಗಳಲ್ಲೊಂದು.
ಟ್ರಾಫಿಕ ಠಾಣೆ ಯ ಪೊಲೀಸರು ಎಂದಾಕ್ಷಣ ನಮಗೆ ನೆನಪಾಗುವುದು ಅವರ ಬಿಳಿಸಮವಸ್ತ್ರ. ಆದರೆ ಸದ್ಯದ ಮಟ್ಟಿಗೆ ಬಂಟ್ವಾಳ ಸಂಚಾರಿ ಠಾಣಾ ಪೊಲಿಸರಿಗೆ ಆ ಭಾಗ್ಯವೂ ಇಲ್ಲವಂತೆ. ಇಲಾಖೆಯಿಂದ ನಿಡಬೇಕಿರುವ ಸಮವಸ್ತ್ರ ಇನ್ನು ಸಿಕ್ಕಿಲ್ಲ. ಪ್ರತಿಯೊಬ್ಬರೂ ಒಒಡಿ ಮೂಲಕ ನಿಯೋಜಿಸಲ್ಪಟ್ಟಿರುವುದರಿಂದ, ಸ್ವಂತಕ್ಕೆ ಬಿಳಿ ವಸ್ತ್ರ ಹೊಲಿಸಲೂ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಬಂಟ್ವಾಳದ ಟ್ರಾಫೀಕ್ ಪೊಲೀಸರು ಖಾಕಿ ಭಾಗ್ಯಕ್ಕೆ ತೃಪ್ತಿಪಡಬೇಕಿದೆ.
ಉಳಿದಂತೆ ಹೊಸ ದೂರವಾಣಿ ದೊರೆತಿದೆಯಾದರೂ, ಇಂಟರ್ ನೆಟ್ ಸಂಪರ್ಕಕ್ಕೆ ಕಂಪ್ಯೂಟರ್ ನ ಅಗತ್ಯತೆ ಇದೆ. ಕಛೇರಿ ಕೆಲಸಕ್ಕೆ ಅಗತ್ಯವಿರುವಪ್ರಿಂಟರ್, ಕ್ಯಾಮೆರಾ, ಜೆರಾಕ್ಸ್ ಮಿಷನ್., ಇನವಾರ್ಟರ್ ವ್ಯವಸ್ಥೆಗಳು ತಕ್ಷಣವೇ ಆಗಬೇಕಿದೆ. ಠಾಣೆ ಮಂಜೂರಾಗಿಸುವಲ್ಲಿ ವಿಶೇಷ ಆಸ್ಥೆ ವಹಿಸಿದ ಸಚಿವ ರೈ ಯವರು ಈ ಬಗ್ಗೆಯೋ ತಮ್ಮ ದೃಷ್ಟಿ ಹರಿಸಿದರೆ ಸಮಸ್ಯೆ ಬೇಗ ಬಗೆಹರಿಯಲು ಸಾಧ್ಯ.
