ಸುದ್ದಿ9 ಬಂಟ್ವಾಳ,ನ.11: ಮಕ್ಕಳ ಸಂರಕ್ಷಣೆ ಮತ್ತು ಪೋಕ್ಸೋ ಆ್ಯಕ್ಟ್ 2012ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಹಿತಿಕಾಯರ್ಾಗಾರವು ಬಂಟ್ವಾಳ ರೋಟರಿ ಸಭಾಂಗಣದಲ್ಲಿ ನ. 10ರಂದು ಕ್ಲಬ್ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ ಅಧ್ಯಕ್ಷತೆಯಲ್ಲಿ ನಡೆಯಿತು.ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ,ವಕೀಲರ ಸಂಘ ರಿ.ಬಂಟ್ವಾಳ , ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಯವ ಕಛೇರಿ ಬಂಟ್ವಾಳ, ಮತ್ತು ರೋಟರಿ ಕ್ಲಬ್ ಬಂಟ್ವಾಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಯರ್ಾಗಾರದಲ್ಲಿ ಗೌ|ಹಿರಿಯ ಸಿವಿಲ್ ನ್ಯಾಯಾಶ ಚಂದ್ರಶೇಖರ .ಯು , ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕಾನೂನಿನ ತಿಳುವಳಿಕೆಯನ್ನು ಕಾಯರ್ಾಗಾರ ಮೂಲಕ ಜನರಿಗೆ ತಲುಪಿಸಬೇಕು ಆಗ ಸಮಾಜದಲ್ಲಿ ನಡೆಯುವ ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಬಹುದು ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪ್ರಧಾನ ಸಿವಿಲ್ ನ್ಯಾಯಾಶ ಜಯಪ್ರಕಾಶ್ ಡಿ.ಆರ್ ಮಾತನಾಡುತ್ತಾ ಪೋಕ್ಸೋ ಆ್ಯಕ್ಟ್ ನ ಪ್ರಾಮುಖ್ಯತೆ ಮತ್ತು ಸರಿಯಾಗಿ ಅನುಷ್ಠಾನ ಗೊಳಿಸುವುದರಿಂದ ಅಹಿತಕರ ಘಟನೆಗಳನ್ನು ತಡೆಗಟ್ಟಬಹುದು, ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕೆಂದು ಸಲಹೆ ಇತ್ತರು.
ಈ ಸಭೆಯನ್ನು ಕ್ಷೇತ್ರ ಶಿಕ್ಷಣಾಕಾರಿ ಶೇಷಶಯನ ಕಾರಿಂಜ ಪ್ರಸ್ತಾವನೆ ನೀಡಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ವರದಿಯಾಗಿಲ್ಲ ಇದರಿಂದ ನಾವು ನಿರಾಳರಾಗಲು ಆಗುವುದಿಲ್ಲ ಕೆಲವು ಘಟನೆಗಳು ಕಾನೂನಿನ ಅರಿವಿಲ್ಲದೆ ವರದಿಯಾಗದಿರಬಹುದು ಆದುರಿಂದ ಇದನ್ನು ತಡೆಗಟ್ಟಲು ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಎಂ., ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಆಲಿ, ಬಂಟ್ವಾಳ ರೊಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಎಂ.ಅಶ್ವನಿ ಕುಮಾರ್ ರೈ ,ರೊ|ಕಾರ್ಯದಶರ್ಿ ಸಂಜೀವ ಪೂಜಾರಿ ಗುರುಕೃಪ, ಬಿ.ಆರ್.ಸಿ. ರಾಜೇಶ್ ಭಾಗವಹಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ರೊ|ಭಾನು ಶಂಕರ್ ಬನ್ನಿಂತಾಯ ಪೋಕ್ಸೋ ಆ್ಯಕ್ಟ್ 2012ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಕಾರಿ ಸ್ವಾಗತಿಸಿ, ರೊ| ಕೆ.ನಾರಾಯಣ ಹೆಗ್ಡೆ ವಂದಿಸಿದರು., ರೊ|ಅಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.
003...

By Suddi9

Leave a Reply

Your email address will not be published. Required fields are marked *