ಬಂಟ್ವಾಳ: ಸಾಧನೆಗೆ ಯಾವುದು ಕೂಡ ಅಡ್ಡಿಯಲ್ಲ, ಮನಸ್ಸಿದ್ದರೆ ಸಾಧಿಸುವ ಛಲ ಇದ್ದರೆ ಆತನಿಗೆ ಅಂಗವಿಕಲ ಅಡ್ಡಿಯಲ್ಲ ಎನ್ನವುದಕ್ಕೆ ಇಲ್ಲೊಬ್ಬ ಸಾಕ್ಷಿಯಾಗಿದ್ದಾನೆ. ಕುರುಡನಾದರೂ ಅವಿರತ ಶ್ರಮದಿಂದ ವಿದ್ಯಾಭ್ಯಾಸ ಪಡೆದು ಸರಕಾರಿ ಉದ್ಯೋಗವನ್ನು ಗಿಟ್ಟಿಸಿಕೊಂಡು ಪ್ರಸ್ತುತ ಗ್ರಾ.ಪಂ.ನ ಅಕೌಂಟೆಟ್ ಆಗಿ ಕೆಲಸಕ್ಕೆ ಸೇರಿ ಇತರರಿಗೆ ಮಾದರಿಯಾಗಿದ್ದಾನೆ. ಬೆಳಕನ್ನು ಕಾಣದ ವ್ಯಕ್ತಿಯೋರ್ವನ ಸಾಧನೆಗೆ ಇಡೀ ತಾಲೂಕಿನ ಜನ ಬೇಷ್ ಎಂದಿದ್ದಾರೆ.


ಆತ ಹುಟ್ಟು ಕುರುಡ, ಎಂದಿಗೂ ಲೋಕದ ಬೆಳಕನ್ನು ತನ್ನ ಕಣ್ಣಿನಿಂದ ಕಂಡವನಲ್ಲ. ಆದರೂ ತನ್ನೊಳಗಿರುವ ದಿವ್ಯ ಶಕ್ತಿಯಿಂದ ಎಲ್ಲವನ್ನೂ ಗ್ರಹಿಸಿಕೊಳ್ಳುವ ಪ್ರತಿಭಾನ್ವಿತ. ತಾನು ದೃಷ್ಟಿ ಹೀನ ಎಂದು ತನ್ನ ಅಂಗವೈಕಲ್ಯತೆಯ ಬಗ್ಗೆ ಮರುಗದೇ ಪರಿಶ್ರಮ ಪಟ್ಟ ಪರಿಣಾಮ ಇಂದು ಕುರುಡನಾದರೂ ಸಕರ್ಾರಿ ಉದ್ಯೋಗಿ.
ಮೂಲತಃ ಮಂಡ್ಯ ಜಿಲ್ಲೆಯ ಗಾಂಧಿ ನಗರ ನಿವಾಸಿ ಶಿವಕುಮಾರ ಆರ್. ಹುಟ್ಟುವಾಗಲೇ ದೃಷ್ಟಿ ಕಳೆದುಕೊಂಡಿದ್ದ. ರಾಧಮ್ಮ ಎಂಬವರ ಮೂರು ಮಕ್ಕಳ ಪೈಕಿ ಶಿವಕುಮಾರ ಮೊದಲಿಗ. ಮೊದಲೇ ಬಡ ಕುಟುಂಬ. ಅದರಲ್ಲೂ ದೃಷ್ಟಿಹೀನ ಮಗನಿಗೆ ಜನ್ಮಕೊಟ್ಟೆನಲ್ಲಾ ಎಂದು ಪೋಷಕರು ಮರುಗದೇ ಚೆನ್ನಾಗಿ ವಿದ್ಯಭ್ಯಾಸ ನೀಡಿದರು. ಈ ಅವಕಾಶವನ್ನು ಬಳಸಿಕೊಂಡ ಶಿವಕುಮಾರ್ ಬಿ.ಎ. ಪದವೀಧರನಾದ. ಬಳಿಕ ಕೆಪಿಎಸ್ಸಿ ಪರೀಕ್ಷೆ ಬರೆದು ಸಕರ್ಾರಿ ಹುದ್ದೆಯನ್ನು ಗಿಟ್ಟಿಸಿಕೊಂಡ. ಇದೀಗ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮಪಂಚಾಯತ್ನಲ್ಲಿ ಅಕೌಂಟೆಟ್ ಆಗಿ ಸಕರ್ಾರ ನೇಮಕಾತಿ ಮಾಡಿದ್ದರು ತಾಲೂಕು ಕೇಂದ್ರದಿಂದ ಅಲ್ಲಿಯವರಗೆ ಹೋಗಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗ ಬಹುದು ಎನ್ನುವ ಮಾನವೀಯ ದೃಷ್ಟಿಯಿಂದ ತಾಲೂಕು ಪಂಚಾಯತ್ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳಿಸಿದ್ದಾರೆ. ಕಳೆದ ಆಗಸ್ಟ್ 18ರಿಂದ ಶಿವಕುಮಾರ್ ಇಲ್ಲಿ ಕರ್ತವ್ಯ ಆರಂಭಿಸಿದ್ದಾನೆ. ತನ್ನಲ್ಲಿರುವ ಐಪಾಡ್ ಹಾಗೂ ವಿಶೇಷ ಜ್ಞಾನದ ನೆರವಿನಿಂದ ಶಿವಕುಮಾರ್ ಎಲ್ಲರಂತೆ ಕರ್ತವ್ಯ ನಿರ್ವಹಿಸುತ್ತಾನೆ.
ಸಾಮಥ್ರ್ಯ ಸೌಧವೇ ಸೂರು:
ಮಂಡ್ಯದಿಂದ ಬಂಟ್ವಾಳಕ್ಕೆ ಕೆಲಸಕ್ಕೆ ಬಂದಿರುವ ಶಿವಕುಮಾರನಿಗೆ ಉಳಿದುಕೊಳ್ಳಲು ಯಾವುದೇ ಸ್ಥಳವಿಲ್ಲದೇ ಇರುವುದರಿಂದ ಸದ್ಯ ಬಿ.ಸಿ.ರೋಡಿನಲ್ಲಿರುವ ಸಾಮಥ್ರ್ಯ ಸೌಧ ಸೂರು. ಯಾವುದಾದರೂ ಹಾಸ್ಟೆಲ್ ಸಿಕ್ಕರೆ ಒಳಿತು ಎನ್ನುವ ಈತನ ಪ್ರಯತ್ನಕ್ಕೆ ತಾಲೂಕು ಪಂಚಾಯತ್ನ ಅಧಿಕಾರಿಗಳು ಪ್ರಯತ್ನದಲ್ಲಿದ್ದಾರೆ. ತಾಲೂಕು ಪಂಚಾಯತ್ ಕಚೇರಿಯ ಬಳಿಯೇ ಇರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿವರ್ಾಹಣಾಧಿಕಾರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಆತನ ಹುಟ್ಟೂರಿನಲ್ಲಿಯೇ ಆತನಿಗೆ ಅನುಕೂಲವಾಗುವ ಉದ್ಯೋಗ ಒದಗಿಸಿಕೊಡಬೇಕು ಎನ್ನುವ ಅಭಿಪ್ರಯವನ್ನು ಕೆಲ ತಾಲೂಕು ಪಂಚಾಯತ್ ಸದಸ್ಯರು ವ್ಯಕ್ತ ಪಡಿಸಿದ್ದಾರೆ.
ಸಿರಿಕಂಠದ ಗಾಯಕ:
ಶಿವಕುಮಾರ್ ಉತ್ತಮ ಹಾಡುಗಾರ. ತನ್ನ ಸಿರಿಕಂಠದಲ್ಲಿ ಹಾಡಿದನೆಂದರೆ ಎಂತವರನ್ನು ಮಂತ್ರಮುಗ್ದಗೊಳಿಸಬಲ್ಲ. ಸಂಗೀತಾ ಜ್ಯೂನಿಯರ್ ಪರೀಕ್ಷೆಯನ್ನು ಈಗಾಗಲೇ ತೇರ್ಗಡೆಗೊಳಿಸಿದ್ದಾನೆ. ತನ್ನಲ್ಲಿರುವ ಈ ವಿದ್ಯೆಯನ್ನು ಬೇರೆಯವರಿಗೂ ದಾರೆಯೆರೆಯ ಬೇಕು, ಬಿಡುವಿನ ವೇಳೆಯಲ್ಲಿ ವಿದ್ಯಾಥರ್ಿಗಳಿಗೆ ಉಚಿತವಾಗಿ ಸಂಗೀತ ಕಲಿಸಿಕೊಡಬೇಕು ಎಂಬ ಅಭಿಲಾಷೆ ಈತನದ್ದು.
