ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲೂಕಿನ ಅರಳ ಗ್ರಾಮದಿಂದ ಮುಲ್ಲಾರಪಟ್ನಕ್ಕೆ ಸಂಪಕರ್ಿಸುವ ರಸ್ತೆ ಮಧ್ಯೆ ಕೆಸರು ಕಂಬಳ ನಿಮರ್ಾಣವಾಗಿದೆ. ಜಿಲ್ಲಾ ಪಂಚಾಯತ್ಗೆ ಸೇರಿದ ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ತುಂಬಿಕೊಂಡು ವಾಹನ ಸಂಚಾರ ಕಷ್ಟದಾಯಕ ವಾಗುತ್ತಿದೆ.
ಅರಳದಿಂದ ಮುಲ್ಲರಪಟ್ನಕ್ಕೆ ಸಂಪಕರ್ಿಸುವ ರಸ್ತೆಯಲ್ಲಿ ಐದಾರು ಕಿ.ಮೀ. ಸಂಚರಿಸಿದಾಗ ಕೆಸರು ಕಂಬಳದಂತಹ ರಸ್ತೆಯೊಂದು ವಾಹನ ಸವಾರರನ್ನು ಎದುರುಗೊಳ್ಳುತ್ತದೆ. ರಸ್ತೆಗೆ ಹಾಕಿದ ಡಾಮರೆಲ್ಲಾ ಕಿತ್ತು ಹೋಗಿ ಹೊಂಡ ನಿಮರ್ಾಣಗೊಂಡ ಪರಿಣಾಮ ವಾಹನಗಳು ತೆವಲಿಕೊಂಡು ಹೋದಂತೆ ಬಾಸವಾಗುತ್ತದೆ. ಲಘುವಾಹನಗಳು ಇಲ್ಲಿ ಉರುಳಿ ಬೀಳುವ ಸಾಧ್ಯತೆ ಹೆಚ್ಚು ಇದೆ. ಅಕಾಸ್ಮಾತ್ ಉರುಳಿ ಬಿದ್ದರೆ ಸವಾರನ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಿದೆ.
ಈ ರಸ್ತೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿದ್ದರೂ ಈ ರಸ್ತೆಯ ಮೂಲಕವೇ ಮಂಗಳೂರು ತಾಲೂಕು ವ್ಯಾಪ್ತಿಯ ಗುರುಪುರ, ಗಂಜಿಮಠ, ಎಡಪದವು, ವಾಮಂಜೂರು ಪ್ರದೇಶಗಳನ್ನು ತಲುಪಲು ಸಾಧ್ಯ. ಆದರೆ ಹದಗೆಟ್ಟ ರಸ್ತೆಯಿಂದಾಗಿ ವಾಹನ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ನಿತ್ಯ ಬಸ್ ಕೂಡ ಈ ರಸ್ತೆಯಲ್ಲಿ ಚಲಿಸುತ್ತಿದ್ದು ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರಾಣ ಬಿಗಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿಯಲ್ಲಿ ರಸ್ತೆಯಲ್ಲಿರು ಈ ಹೊಂಡ ತಂದಿಟ್ಟಿದೆ.

 

4a

 

By Suddi9

Leave a Reply

Your email address will not be published. Required fields are marked *