fbcc6ea0347c466dbc82392b5ccdfed3

ಬೆಂಗಳೂರು: ರೈತರ ಸಾಲ ಮನ್ನಾಗೆ ಒತ್ತಾಯಿಸಿ ರೈತ ಸಂಘಟನೆಗಳು, ಕರೆ ನೀಡಿರುವ,ಬಿಜೆಪಿ ಬೆಂಬಲಿಸಿರುವ  ಸೋಮವಾರದ ರಾಜ್ಯ ಬಂದ್‌ ಕರೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕಬ್ಬು ಬೆಳೆಗಾರರ ಸಂಘ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಮಾತನಾಡಿ ಬಿಜೆಪಿ ಏಕಪಕ್ಷೀಯವಾಗಿ ಬಂದ್‌ಗೆ ಕರೆ ನೀಡಿದೆ. ಯಾರೇ ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಬಂದ್‌ಗೆ ನಮ್ಮ ಬೆಂಬಲವಿಲ್ಲ. ನಾವು ರೈತ ವಿರೋಧಿಯಲ್ಲ. ರೈತ ಪರ ಹೋರಾಟಗಳಿಗೆ ಸದಾ ನಮ್ಮ ಬೆಂಬಲ ಇದೆ ಎಂದರು.

ಕಬ್ಬು ಬೆಳೆಗಾರರ ಸಂಘದ ಕುರಬೂರು ಶಾಂತಕುಮಾರ್‌ ಅವರು ಮೈಸೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈಗಷ್ಟೇ ನೂತನ ಸರ್ಕಾರ ಬಂದಿದೆ. ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡುವ ವಿಶ್ವಾಸವಿದೆ. ಬಂದ್‌ ಕುರಿತಾಗಿ ಯಾರು ನಮ್ಮನ್ನು ಸಂಪರ್ಕಿಸಿಲ್ಲ. ನಾವು ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

ರೈತ ಸಂಘಟನೆಗಳು ಕರೆ ನೀಡಿರುವ ಬಂದ್‌ ಅನ್ನು ಬಿಜೆಪಿ ಬೆಂಬಲಿಸಿದೆ ಎಂದು ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ರಾಜ ರಾಜೇಶ್ವರಿ ನಗರದಲ್ಲಿ ಚುನಾವಣೆ ಇರುವು ದರಿಂದ ಬೆಂಗಳೂರು ಬಿಟ್ಟು ಉಳಿದ ಕಡೆಗಳಲ್ಲಿ ಬಂದ್‌ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ನಾವು ಬಂದ್‌ಗೆ ಕರೆ ನೀಡಿಲ್ಲ. ರೈತ ಸಂಘಟನೆಗಳು ಕರೆ ನೀಡಿರುವ ಬಂದ್‌ ಅನ್ನು ಬೆಂಬಲಿಸಿದ್ದೇವೆ. ಸದನದಲ್ಲೂ ನಾನು ಅದನ್ನೇ ಹೇಳಿದ್ದೆ’ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *