Raitha sangha milk dairy news 26-5-2018 (2)

ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಡೆದ ಭ್ರಷ್ಟಾಚಾರವನ್ನು ಸಿಬಿಐಗೆ ಒಪ್ಪಿಸಬೇಕು ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಹುದ್ದೆಯಿಂದ ವಜಾ ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೇ 29ರಂದು ಹಾಲು ಒಕ್ಕೂಟದ ಎದುರು ಹೋರಾಟ ನಡೆಸಲಾಗುವುದು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೋಲಾರ ಜಿಲ್ಲಾ ರೈತ ಸಂಘದ ಕಚೇರಿಯಲ್ಲಿ ಕರೆದಿದ್ದ ರೈತ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಗ್ರಾಮೀಣ ಪ್ರದೇಶಗಳ ಜೀವನಾಡಿ ಹೈನುಗಾರಿಕೆಯ ಸಂಸ್ಥೆ 1994 ರಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸ್ಥಾಪನೆಯಾಗಿ 24 ವರ್ಷ ಕಳೆದು ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ನಂಬಿ ಜೀವನ ಮಾಡುತ್ತಿವೆ. ಆದರೆ ಇತ್ತೀಚೆಗೆ ಅಧಿಕಾರಿಗಳ ಹಣದ ದಾಹ ರಾಜಕೀಯ ಬಲದಿಂದ ಸಂಸ್ಥೆ ದಿನದಿಂದ ದಿನಕ್ಕೆ ನಷ್ಟದತ್ತ ಮುಖಮಾಡುತ್ತಿದೆ ದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ ಎಂಬ ಮಾಹಿತಿ ಇದ್ದರೂ ನಂದಿಕ್ರಾಸ್‍ಬಳಿ ಇರುವ ಮೆಗಾ ಡೇರಿಯ ಉದ್ಘಾಟನೆಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂ. ಹಣ ದುರುಪಯೋಗ ಪಡಿಸಿಕೊಂಡು, ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿರುವ ಹಾಲು ಒಕ್ಕೂಟವನ್ನು ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಹಂಚಿಕೊಂಡು ಬಡವರ ಜೀವನವನ್ನು ಬೀದಿಪಾಲು ಮಾಡುವ ಅಧಿಕಾರಿಗಳನ್ನು ಪ್ರಶ್ನಿಸಲು ಹೋದರೆ, ರಾಜಕೀಯ ಬಲ ನಮಗಿದೆ ನಮ್ಮನ್ನು ಏನು ಮಾಡುವುದಕ್ಕೂ ಆಗುವುದಿಲ್ಲ ಎಂಬ ದೌರ್ಜನ್ಯದ ಮಾತುಗಳು ಕೇಳಿ ಬಿರುತ್ತಿವೆ ದು ದೂರಿದರು.

ಈ ಹೋರಾಟದ ಮುಖಾಂತರ ಸಾರ್ವಜನಿಕವಾಗಿ ಅಧಿಕಾರಿಗಳು ನಮಗೆ ಉತ್ತರ ಕೊಡಬೇಕಾಗಿದೆ. ಇಲ್ಲವಾದರೆ ಈ ಹಗರಣಗಳನ್ನು ಸಿಬಿಐಗೆ ಒಪ್ಪಿಸುವಂತೆ ಆಹೋರಾತ್ರಿ ಧರಣಿಯನ್ನು ಹಮ್ಮಿಕೊಂಡು ಹಿರಿಯ ಅಧಿಕಾರಿಗಳ ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಉತ್ತರ ನೀಡುವವರೆಗೂ ಯಾವುದೇ ಕಾರಣಕ್ಕೂ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯ ಇಲ್ಲವೆಂದು ಹಾಲು ಒಕ್ಕೂಟದ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಎ.ನಳಿನಿ, ಭರತ್, ರಂಜಿತ್, ಸಾಗರ್, ಸುಪ್ರಿಂಚಲ, ಕೆಂಬೋಡಿ ಕೃಷ್ಣೇಗೌಡ, ಮೂರಂಡಹಳ್ಳಿ ಶಿವಾರೆಡ್ಡಿ, ಈಕಂಬಳ್ಳಿ ಮಂಜುನಾಥ, ನರಸಾಪುರ ಪುರುಶೋತ್ತಮ್, ಶಿವ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ, ಮುದುವಾಡಿ ಚಂದ್ರಪ್ಪ, ವೇಮಗಲ್ ಅಮರನಾರಾಯಣಸ್ವಾಮಿ, ಗಣೇಶ್, ನರಸಾಪುರ ರೆಹಮಾನ್, ಮಂಜುನಾಥರೆಡ್ಡಿ, ಟಿಪ್ಪು, ಐತಂಡಹಳ್ಳಿ ಅಂಬರೀಶ್ ಮುಂತಾದ ಜಿಲ್ಲಾ ಮತ್ತು ತಾಲೂಕು ಮುಖಂಡರು ಹಾಜರಿದ್ದರು

By suddi9

Leave a Reply

Your email address will not be published. Required fields are marked *