31641902_1578133262295621_201648203446091776_n

ಮಂಗಳೂರು: ಗಲ್ಫ್ ರಾಷ್ಟಗಳ  ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡು ದೇಶಕ್ಕೆ ಮರಳುತ್ತಿರುವ ಅನಿವಾಸಿ ಕನ್ನಡಿಗರ ಪುನರ್ವಸತಿಗೆ ಅಗತ್ಯ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಗುರುವಾರ ನೂತನ ಸಿಎಂ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?:  ತಮ್ಮ ಕುಟುಂಬದ ಜೀವನ ನಿರ್ವಹಿಸಲು ಉದ್ಯೋಗವನ್ನು ಅರಸಿ ವಿದೇಶಕ್ಕೆ ತೆರಳಿರುವ ಅನಿವಾಸಿ ಭಾರತೀಯರು ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು,  ಈ ಪೈಕಿ ಅನಿವಾಸಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.  ಗಲ್ಫ್ ರಾಷ್ಟ್ರಗಳ ಸ್ವದೇಶೀಕರಣ ನೀತಿ  ಹಾಗೂ ಹೊಸ ಕಾರ್ಮಿಕ ಕಾನೂನಿಂದ ಹಲವು ಅನಿವಾಸಿ ಕನ್ನಡಿಗರು ಉದ್ಯೋಗವನ್ನು ಕಳೆದುಕೊಂಡಿದ್ದರೆ ಇನ್ನು ಕೆಲವರು ಉದ್ಯೋಗವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಶೇ. 40 ರಷ್ಟು ಅನಿವಾಸಿ ಕನ್ನಡಿಗರು ಈಗಾಗಲೇ ಉದ್ಯೋಗ ಕಳೆದುಕೊಂಡು ದೇಶಕ್ಕೆ ಸೇರಿದ್ದರೆ ಇನ್ನುಳಿದ ಶೇ. 60 ರಷ್ಟು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡು‌ ನಿರುದ್ಯೋಗಿಗಳಾಗಿ ಕರ್ನಾಟಕಕ್ಕೆ ಮರಳಲು ದಿನಗಳನ್ನು ಎಣಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳುತ್ತಿರುವ ಅನಿವಾಸಿ ಕನ್ನಡಿಗರಿಗೆ ಉತ್ತಮ ಯೋಜನೆ ಜಾರಿಮಾಡುವ ಮೂಲಕ ನಿರುದ್ಯೋಗಿ ಅನಿವಾಸಿ ಕನ್ನಡಿಗರೆ ನೆರವಾಗಬೇಕು ಎಂದು ರಿಯಾಝ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

By Suddi9

Leave a Reply

Your email address will not be published. Required fields are marked *