Mangalore-Jail

ಮಂಗಳೂರು: ಸಬ್​ಜೈಲಿನಲ್ಲಿ  ಖೈದಿಗಳು ಹೊಡೆದಾಡಿಕೊಂಡ ಘಟನೆ ನಗರದ ಕೊಡಿಯಾಲ್ ಬೈಲ್ ನಲ್ಲಿನ ಸಬ್ ಜೈಲಿನಲ್ಲಿ  ಸೋಮವಾರ ತಡರಾತ್ರಿ ನಡೆದಿದೆ.

ಈ ಸಂದರ್ಭ ಗಲಾಟೆ ತಡೆಯಲೆಂದು ಮಧ್ಯ ಪ್ರವೇಶಿದ ಜೈಲು ಅಧೀಕ್ಷಕರು ಹಾಗೂ ಮೂವರು ಪೊಲೀಸ್​ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದ್ದಾರೆ.  ಘಟನೆಯಲ್ಲಿ ಜೈಲು ಅಧೀಕ್ಷಕ ಪರಮೇಶ್ವರ್, ಸಿಬ್ಬಂದಿ ರಮೇಶ್ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.

ಘಟನೆಗೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

.

By Suddi9

Leave a Reply

Your email address will not be published. Required fields are marked *