ಗುರುಪುರ: ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಭರತ್ ಕುಮಾರ್ ಶೆಟ್ಟಿ ಭರ್ಜರಿ ಗೆಲುವು ಸಾಧಿಸಿದ್ದು, ಗುರುಪುರ ಪೇಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ಹಂಚಿ ವಿಜಯೋತ್ಸವ ಆಚರಿಸಿದರು.
ಡಾ. ಭರತ್ ಶೆಟ್ಟಿ ಕಾಂಗ್ರೆಸ್ಸಿನ ಹಾಲಿ ಶಾಸಕ ಮೊಯಿದ್ದೀನ್ ಬಾವರೆದುರು ಗೆಲುವು ದಾಖಲಿಸುತ್ತಲೇ, ಗುರುಪುರದ ಬಿಜೆಪಿ ಕಾರ್ಯಕರ್ತರು ಬೈಕುಗಳಲ್ಲಿ ರ್ಯಾಲಿ ನಡೆಸಿ ಪ್ರಧಾನಿ ಮೋದಿ, ಅಮಿತ್ ಶಾ, ಡಾ. ಶೆಟ್ಟಿಗೆ ಜೈಕಾರ ಹಾಕಿದರು. ಅಲ್ಲದೆ, ಈ ಗೆಲುವಿನ ಹಿಂದೆ ಅಹೋರಾತ್ರಿ ಕೆಲಸ ಮಾಡಿರುವ ಎಲ್ಲರೂ ಒಂದೆಡೆ ಸೇರಿ `ಹಿಂದೂಸ್ತಾನ್ ಕೀ ಜೈ’ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿಗಳಾದ ರಾಜೇಶ್ ಸುವರ್ಣ, ಶ್ರೀಕರ ಶೆಟ್ಟಿ, ವಕೀಲ ಜಯಪ್ರಕಾಶ ಭಂಡಾರಿ, ಪ್ರಶಾಂತ್ ಮುಂಡ, ಸುಧೀರ್ ಕಾಮತ್, ಹರೀಶ್ ಬಳ್ಳಿ, ಕಿಶೋರ್ ಕುಮಾರ್, ಶ್ಯಾಮ್ ಆಚಾರ್ಯ, ನಳಿನಿ ಶೆಟ್ಟಿ, ಶೋಭಾ ಡಿ, ಸೇಸಮ್ಮ, ಶಾಂತಿ ಮೊದಲಾದವರು ಇದ್ದರು.
ಅತ್ತ ಗುರುಪುರ ಕೈಕಂಬ, ಗಂಜಿಮಠ, ಎಡಪದವು, ಅಡ್ಡೂರು, ಮೂಡುಶೆಡ್ಡೆಯಲ್ಲಿ ಡಾ. ಶೆಟ್ಟಿ ಗೆಲುವಿಗೆ ಭಾರೀ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪಾದಯಾತ್ರೆ ನಡೆಸಿ ವಿಜಯೋತ್ಸವ ಆಚರಿಸಿದರು.



