iiiuytttt-768x437

ಬೆಳ್ತಂಗಡಿ: ಮತ ಹಾಕಲು ತೆರಳುತ್ತಿದ್ದಾಗ ಹೃದಯಘಾತವಾಗಿ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಂಡಿಂಜೆ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಅಂಡಿಂಜೆ ಗ್ರಾಮದ ಜಾರಿಗೆದಡಿ ನಿವಾಸಿ ಅಣ್ಣಿ ಆಚಾರ್ಯ(70) ಎಂದು ಗುರುತಿಸಲಾಗಿದೆ.

ಮತ ಹಾಕಲು ಶಾಲೆಯ ಮತಗಟ್ಟೆಗೆ ಬಂದಾಗ ಮುಂಭಾಗದಲ್ಲಿ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ.ಇವರು ಮರದ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *