10vp rai templಪೊಳಲಿ : ಅರಣ್ಯ ಹಾಗೂ ದ ಕ ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಮೇ 10ರಂದು ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕರ್ತರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ರೈಗೆ ದೇವಸ್ಥಾನದ ಪ್ರಧಾನ ಅರ್ಚಕ ಮಾಧವ ಭಟ್ ಪ್ರಸಾದ ವಿತರಿಸಿದರು. ಬಳಿಕ ಪೊಳಲಿ ರಥಬೀದಿಯಲ್ಲಿ ರೋಡ್ ಶೋನಡೆಸಿದರು.10vprai1

“ಇದುವರೆಗೂ ರಸ್ತೆಯೇ ಕಾಣದ ಈ ಭಾಗದಲ್ಲಿ ಕೆಲವು ಪ್ರಮುಖ ರಸ್ತೆ ನಿರ್ಮಿಸಿದ್ದೇನೆ. ಸಾಕಷ್ಟು ಅಭಿವೃದ್ಧಿ ಕೆಲಸಗಳು ಈ ಕ್ಷೇತ್ರದಲ್ಲಿ ನಡೆದಿವೆ. ಮತದಾರರು ಈ ವಿಷಯ ಗಮನದಲ್ಲಿಟ್ಟುಕೊಂಡರೆ ಸಾಕು” ಎಂದು ರೈ ಜನರೆದುರು ಕೈಮುಗಿದು ಮತ ಕೇಳಿದರು.ನಂತರ ರೈ ಹಾಗೂ ಪಕ್ಷ ಕಾರ್ಯಕರ್ತರು ಅಂಗಡಿಗಳು, ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.ಕರಿಯಂಗಳದ ಪುಂಚಮೆ ಬಡಕಬೈಲ್, ಮಂಗಾಜೆ ಮುಂತಾದ ಕಡೆಗಳಲಲ್ಲಿ ಮನೆಮನೆಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಿದರು.10vprai

10rai2

ಈ ಸಂದರ್ಭದಲ್ಲಿ ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಬೇಬಿಕುಂದರ್, ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಪಿ ಎಚ್ ಖಾದರ್,ಮಂಗಳೂರುತಾಲೂಕು ಪಂಚಾಯತಿ ಅಧ್ಯಕ್ಷ ಮಹಮ್ಮದ್‍ಮೋನು, ಕರಿಯಂಗಳದ ಕಾರ್ಯಕರ್ತರಾದ ಉಮೇಶ್ ಆಚಾರ್ಯ, ಚಂದ್ರಹಾಸ ಪಳ್ಳಿಪಾಡಿ, ವೀಣಾ ಯು ಆಚಾರ್ಯ, ಚಂದ್ರಶೇಖರ ದೇವಾಡಿಗ, ಹರಿಪ್ರಸಾದ್ ಶೆಟ್ಟಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *