ಮಂಗಳೂರು: ೧೨ನೇ ತಾರಿಕಿನವರೆಗೆ ಅಧಿಕಾರವು ನಮ್ಮ ಕೈಯಲ್ಲಿದೆ.ಸುಂದರವಾದ ಕರ್ನಾಟಕವನ್ನು ಯಾರು ಮುನ್ನಡಸಬೇಕೆಂಬದನ್ನು ತೀರ್ಮಾನಿಸುವವರು ಮತದಾರರಾದ ನಾವಾಗಿದ್ದೇವೆ.
ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಬುತ್ವ ದೇಶವೆಂಬ ಹೆಗ್ಗೆಳಿಕೆ ಪಡೆದವರಾದ ನಮ್ಮ ಹಕ್ಕಾಗಿದೆ ಮತ ಚಲಾಯಿಸುವುದು.ಆ ಹಕ್ಕನ್ನು ನೊಟಿಗೊ ಸೀರೆಗಳಿಗೊ ಹಾಗೂ ಇನ್ನಿತರ ಪೊಳ್ಳುಭರವಸೆಗಳಿಗೊ ಅಡವಿಡದೆ ನಮ್ಮ ದೇಶದ ಹಾಗೂ ರಾಜ್ಯದ ಉದ್ದಾರಕ್ಕಾಗಿ ಚಲಾಯಿಸಬೇಕಾಗಿದೆ.
ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ನೊಡಿಕೊಂಡು ನಮ್ಮ ಕರ್ನಾಟಕವನ್ನು ಇಡೀ ದೇಶಕ್ಕೆ ಮಾದರಿಯನ್ನಾಗಿ ಮಾಡಬೇಕಾದವರಾಗಬೇಕು ನಾವು.
ಸಮ್ಮಿಶ್ರ ಸರಕಾರ ಬಂದರೆ ನಮ್ಮ ರಾಜ್ಯದ ಅಬಿವ್ರದ್ದಿ ಕುಂಠಿತಗೊಳ್ಳಬಹುದೆಂಬ ಮನವರಿಕೆ ನಮಗಿರಬೇಕು.ಒಂದೇ ಮುಖ್ಯಮಂತ್ರಿ 5 ವರ್ಷ ಆಡಳಿತನಡೆಸಬೇಕೇ ಒರತು 5 ಮುಖ್ಯಮಂತ್ರಿ ಒಂದು ವರ್ಷ ಆಡಳಿತ ನಡೆಸುವವರಾಗಬಾರದೆಂಬ ಆಸೆಯು ನಮಗಿರಬೇಕು.ಹಿಂದುಗಳ ಓಟು ಮುಸ್ಲಿಮರಿಗೆ ಮುಸ್ಲಿಮರ ಓಟು ಹಿಂದುಗಳಿಗೆ ಬೇಡವಂಬ ದುರಂಹಕಾರದ ಮಾತಾಡುವವರನ್ನು ಸೊಲಿಸಿ ನಮ್ಮ ರಾಜ್ಯದಲ್ಲಿ ಅಂತಹವರಿಗೆ ಸ್ಥಾನವಿಲ್ಲವೆಂದು ತೊರಿಸಿಕೊಡಬೇಕಾಗಿದೆ.
ಪ್ರಣಾಳಿಕೆಗಳು ಬರೇ ಚುನಾವಣೆಗಳಿಗೆ ಸೀಮಿತವಾಗದೆ ನುಡಿದಂತೆ ನಡೆಯುವ ಸರಕಾರದ ಕನಸು ನಾವು ಕಾಣಬೇಕಾಗತ್ತದೆ.
ನಾವು ಚುನಾಯಿಸುವವರು ಅವರಿಗೆ ಬೇಕಾದಾಗ ಮಾತ್ರ ಅವರ ಸಂಖಟಗಳನ್ನು ಹೇಳಿ ಕೈ ಮುಗಿಯುವವರಾಗದೆ ನಮ್ಮ ಕಷ್ಟ ನಷ್ಟಗಳಿಗೂ ಸುಖ ಸಂತೊಷಗಳಿಗೂ ನಮ್ಮೊಂದಿಗಿರುವವರಾಗಿರಬೇಕು.
ನಮ್ಮ ಕ್ಷೇತ್ರದ ಅಭಿವ್ರದ್ದಿ ಹಾಗೂ ಸಮಸ್ಯೆಗಳ ದ್ವನಿ ಸದನದ ಒಳಗೂ ಹೊರಗೂ ಎತ್ತುವವರಾಗಿರಬೇಕು.
