ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಸಮೀಪದ ತಾರಿಗುಡ್ಡೆ ಎಂಬಲ್ಲಿ ಪತ್ನಿಯೊಬ್ಬರು ತನ್ನ ಪತಿಯ ಕೈ ಬೆರಳು ತುಂಡರಿಸಿದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ನಿವಾಸಿ ಮೋನಪ್ಪ ಮಡಿವಾಳ ಎಂಬವರ ಪುತ್ರ ಜನಾರ್ದನ ಎಂಬವರ ಮೊದಲ ಪತ್ನಿ ಕೆಲವು ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ. ಇದರಿಂದಾಗಿ ಎರಡನೇ ಪತ್ನಿಯಾಗಿ ಸೀತಾ ಎಂಬಾಕೆಯನ್ನು ವಿವಾಹವಾಗಿದ್ದರು. ಸೋಮವಾರ ಬೆಳಗ್ಗೆ ಇವರಿಬ್ಬರ ನಡುವೆ ಉಂಟಾದ ಮನಸ್ತಾಪದಿಂದ ಪತ್ನಿ ಸೀತಾ ತನ್ನ ಪುತ್ರ ವಿಶ್ವನಾಥ ಮತ್ತು ಆತನ ಸ್ನೇಹಿತ ಲೋಕೇಶನೊಮದಿಗೆ ಸೇರಿ ಪತಿಗೆ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪತಿ ಜನಾರ್ದನ ಅವರ ಬಲಗೈ ಹೆಬ್ಬರಳು ತುಂಡಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

