ಮಂಗಳೂರು: ಜಮ್ಮು ಕಾಶ್ಮೀರದ, ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸುವ ಭರದಲ್ಲಿ ಆ ಸಂತ್ರಸ್ತೆ ಬಾಲಕಿಯ ಹೆಸರು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹಾಗೂ ಫ್ಲೆಕ್ಸ್ ಬ್ಯಾನರ್ ಮೂಲಕ ಪ್ರದರ್ಶಿಸಲಾಗುತ್ತಿದ್ದು, ಇದು ಶಿಕ್ಷಾರ್ಹ ಅಪರಾಧ ಎಂದು ದ.ಕ.ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ ಕಾಯ್ದೆ) 2012 ರ ಸೆಕ್ಷನ್ 23(2) ರ ಪ್ರಕಾರ ಹಾಗೂ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ರ ಸೆಕ್ಷನ್ 74 ರ ಪ್ರಕಾರ 18 ವರ್ಷದೊಳಗಿನ ಸಂತ್ರಸ್ಥ ಮಕ್ಕಳ ಹೆಸರು ಮತ್ತು ಗುರುತನ್ನು ಬಹಿರಂಗೊಳಿಸುವುದು ಶಿಕ್ಷಾರ್ಹ ಅಪರಾಧ. ಅದ್ದರಿಂದ ಸಂತ್ರಸ್ತ ಬಾಲಕಿಯ ಹೆಸರು ಮತ್ತು ಭಾವಚಿತ್ರ ಇರುವ ಫ್ಲೆಕ್ಸ್ ಮತ್ತು ಹೋರ್ಡಿಂಗ್ಸ್‍ನ್ನು ಕೂಡಲೇ ತೆರವುಗೊಳಿಬೇಕು ಎಂದು ದ.ಕ. ಜಿಲ್ಲಾಧಿಕಾರಿಗಳ ತಿಳಿಸಿದ್ದಾರೆ.

