arres

ಮಂಗಳೂರು:  ನಗರದ ಬಾವುಟಗುಡ್ಡೆ ಬಳಿ ಮಾ. 29 ರಂದು ಪಾರ್ಕ್ ಮಾಡಿದ್ದ  ಬೈಕನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಪಂಜಿಮೊಗರುವಿನ ಪ್ರವೀಣ್ ಮೋಂತೇರೋ (22) , ಮಂಗಳೂರು ಪದವಿನಂಗಡಿಯ ಬಿಜಿನ್ ಯಾನೆ ವಿಜಯ್ (20) ಬಂಧಿತ ಆರೋಪಿಗಳು.

 

ಆರೋಪಿ ಪ್ರವೀಣ್ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸಿಕೊಂಡು ಬರುತ್ತಿದ್ದ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಳವು ಗೈದ ವಾಹನವೆಂದು ಖಚಿತ ಪಡಿಸಿ ವಾಹನವನ್ನು ವಶಪಡಿಸಿ ಆರೋಪಿ ಪ್ರವೀಣ್ ಮಾಂತೇರೋ ನನ್ನು ಬಂಧಿಸಲಾಯಿತು.

ಆರೋಪಿ ಪ್ರವೀಣ್ ಮಾಂತೇರೋ ನೀಡಿದ ಮಾಹಿತಿಯಂತೆ ಇನ್ನೋರ್ವ ಆರೋಪಿ ಬಿಜಿನ್ ಯಾನೆ ವಿಜಯ್ ರವರನ್ನು ಮಂಗಳೂರಿನ ಪದವಿನಂಗಡಿ ಬಳಿ ಬಂಧಿಸಲಾಯಿತು.

 

ಮಂಗಳೂರು ಉತ್ತರ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಯೋಗೀಶ್ ಕುಮಾರ್, ಪಿ ಎಸ್ ಐ ಅಪರಾಧ ಅನಂತ ಮುರುಡೇಶ್ವರ, ಎಸ್ ಎಸ್ ಐ ಪದ್ಮನಾಭ, ಸಿಬ್ಬಂದಿಗಳಾದ ವೆಲೆಸ್ಟಿನ್ ಜಾರ್ಜ್ ಡಿ ಸೋಜಾ, ದಯಾನಂದ, ವಾಸು ನಾಯ್ಕ್, ರಮೇಶ್, ಬಸವರಾಜ್, ಸಾಗರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *