ಬೆಳ್ತಂಗಡಿ: ಜಿಲ್ಲಾ ಅಪರಾಧ ದಳ ಎರಡು ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಅಕ್ರಮ ಗೋಮಾಂಸ ಸಾಗಟವನ್ನು ಪತ್ತೆ ಹಚ್ಚಿದ್ದು ಐವರನ್ನು ಈ ಸಂಬಂಧಿತ ಬಂಧಿಸಲಾಗಿದೆ. ಬಂಧಿತರಿಂದ ವಾಹನ ಮತ್ತು ಸುಮಾರು 850 ಕೆ.ಜಿ. ದನದ ಮಾಂಸವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತರಲ್ಲಿ ಸುಮಾರು 14.25 ಲಕ್ಷ ಮೌಲ್ಯದ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ಸಂಬಂಧಿತ ಠಾಣೆಗೆ ವರ್ಗಾಯಿಸಲಾಗಿದೆ. ಗುರುವನಕರೆ ಜಂಕ್ಷನ್ ನಲ್ಲಿ ತಪಾಸಣೆ ವೇಳೆ ಮಹಿಂದ್ರಾ ಝೊಲೊದಲ್ಲಿ 450 ಕೆಜಿ ಮಾಂಸ ದೊರೆತರೆ, ಗುವನಕೆರೆ ವೆನೂರು ರಸ್ತೆಯಲ್ಲಿ ಮಹಿಂದ್ರಾ ಬೊಲೆರೊ ವಾಹನದಲ್ಲಿ 400 ಕಗ ದನದ ಮಾಂಸ ಪತ್ತೆಯಾಗಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಎಲ್ಲ ದನದ ಮಾಂಸವನ್ನು ಹೂಳಲಾಗಿದೆ.
ಕಾರ್ಯಚರಣೆಯಲ್ಲಿ ಇನ್ಸ್ಪೆಕ್ಟರ್ ಸುನೀಲ್ ವೈ ನಾಯಕ್ ಮತ್ತು ಸಿಬ್ಬಂದಿಗಳು ಪಾಲ್ಘೊಂಡಿದ್ದರು.

