kulai-1024x768

ಮಂಗಳೂರು: ಯೋಗಿಗೆ ಹೆಣ್ಣು ಮಕ್ಕಳ ನೋವು ಅರ್ಥವಾಗಲ್ಲ. ಮೋದಿ ಭೇಟಿ ಬಚಾವೋ ಅಂತಾರೆ, ಆದರೆ ಮೋದಿ ತನ್ನ ಪತ್ನಿಗೆ ಹಿಂಸೆ ಕೊಟ್ಟವರು. ಪತ್ನಿಯನ್ನೇ ದೂರ ಇಟ್ಟವರು ಎಂದು ಕಾಂಗ್ರೆಸ್ ಮಹಿಳಾ ರಾಜ್ಯ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಕಿಡಿ ಕಾರಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಅಮಾಯಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದಾರೆ. ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಹಿಂದೂ, ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇರುವುದು. ನನಗೆ, ನಮಗೆ ಖಂಡಿತಾ ಜಾತಿ ಇಲ್ಲ. ಭಾರತ ಮಾತೆ ಅನ್ನುವವರು ಮಹಿಳೆಯರಿಗೆ ರಕ್ಷಣೆ ಕೊಡುತ್ತಿಲ್ಲ. ಸ್ವತಃ ನಾನು ಕೂಡಾ ಹಿಂಸೆ ಅನುಭವಿಸಿದ್ದೇನೆ ಎಂದರು.

 

By suddi9

Leave a Reply

Your email address will not be published. Required fields are marked *