ಮಂಗಳೂರು: ಕುಲಶೇಖರ 110/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಎಕ್ಕೂರು, ಜಪ್ಪಿನ ಮೊಗರು ಹಾಗೂ ಪಂಪ್‌ವೆಲ್ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎ. 7ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ವ್ಯತ್ಯಯಗೊಳ್ಳುವ ಪ್ರದೇಶಗಳು
ಪಡೀಲ್, ವೀರನಗರ, ಫೈಸಲ್‌ನಗರ, ಬಜಾಲ್, ನಂತೂರು, ಕರ್ಮಾರ್, ಜಲ್ಲಿಗುಡ್ಡ, ಕಟ್ಟಪುಣಿ, ಕಲ್ಲಕಟ್ಟೆ, ತುಂಗಾನಗರ, ಜೆ.ಎಂ. ರೋಡ್, ಎಕ್ಕೂರು, ಪಂಪ್‌ವೆಲ್, ನಾಗುರಿ, ಉಜ್ಜೋಡಿ, ಗೋರಿಗುಡ್ಡೆ, ಸದಾಶಿವನಗರ, ಲೇಔಟ್, ಪ್ರಶಾಂತ್‌ಬಾಗ್, ಮೇಘನಗರ, ಕೆಂಬಾರ್, ಕಡೆಕಾರ್, ಜಪ್ಪಿನಮೊಗರು, ತಾರ್ದೊಳ್ಯ, ನೇತ್ರಾವತಿ ಗ್ಯಾರೇಜ್, ನೇತ್ರಾವತಿ ಬಡಾವಣೆ, ಮರೋಳಿ, ವಿಜಯನಗರ, ಕೆ.ಎಚ್.ಬಿ. ಕಾಲನಿ, ಕ್ಯಾಂಪ್ಕೊ ಕ್ವಾರ್ಟರ್ಸ್, ಭಟ್ರಬೆಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಗ್ರಾಮೀಣ ಪ್ರದೇಶದಲ್ಲೂ ವ್ಯತ್ಯಯ
ಮೂಲ್ಕಿ, ಕಿನ್ನಿಗೋಳಿ, ಮೂಡಬಿದಿರೆ ರಾಜ್ಯ ಹೆದ್ದಾರಿಯ ವಿಸ್ತರಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿರುವುದರಿಂದ, ಪುನರೂರು, ಎಳತ್ತೂರು, ಪಕ್ಷಿಕೆರೆ, ಕಿನ್ನಿಗೋಳಿ, ಮೂರು ಕಾವೇರಿ, ದಾಮಸ್‌ಕಟ್ಟೆ, ಗುತ್ತಕಾಡು ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಎ. 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

