170915_sandprotest1

ಬಂಟ್ವಾಳ: ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದೆ.

ಜನಪ್ರತಿನಿಧಿಗಳ ಸಹಾಯ ಹಸ್ತ ಪಡೆದು ಇಲ್ಲಿ ನಿರಂತರವಾಗಿ ದಿನಕ್ಕೆ ಒಂದು ‌ಪರ್ಮಿಟ್ ಮೂಲಕ ಅನೇಕ ಲೋಡ್ ಅಕ್ರಮವಾಗಿ ಸಾಗಿಸುತ್ತಿದ್ದು, ಇದಕ್ಕೆ ಬಂಟ್ವಾಳ ಪ್ರೋಬೆಸನರಿ ಅಕ್ಷಯ್ ಖಾಟೆ, ಗ್ರಾಮಾಂತರ ಎಸ್ಸೈ ಪ್ರಸನ್ನ ಹಾಗೂ ನಗರ ಠಾಣಾ ಎಸ್ಸೈ ಚಂದ್ರಶೇಖರ್, ಅಪರಾಧ ವಿಭಾಗದ ಎಸ್ಸೈ ಹರೀಶ್ ಹಾಗೂ ಸಂಚಾರ ವಿಭಾಗದ ಎಸ್ಸೈ ಉಲ್ಲಪ್ಪ ಅವರ ವಿಶೇಷ ತಂಡ ತಡೆಯೊಡ್ಡಿದೆ.

ಇಲ್ಲಿನ ಪರಂಗಿಪೇಟೆ ಯಲ್ಲಿ ಬ್ಯಾರಿಕೇಡ್ ಗಳನನ್ನು ಹಾಕಿ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ . ಮರಳು ಸಾಗಿಸುವ ಲಾರಿಗಳ ಪರ್ಮಿಟ್ ಗಳನ್ನು ತಪಾಸಣೆ ನಡೆಸಿ ಅದಕ್ಕೆ ಸೀಲ್ ಹಾಕಲಾಗುತ್ತದೆ. ಒಂದು ಪರ್ಮಿಟ್ ನಲ್ಲಿ ಒಂದೇ ಲೋಡ್ ಸಾಗಾಟ ಮಾಡುವಂತೆ ಸೀಲ್ ಹಾಕಲಾಗುತ್ತದೆ. ಒಂದು ವೇಳೆ ಅದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ವಿದೆ ಎಂದು ಪೋಲಿಸರು ತಿಳಿಸಿದ್ದಾರೆ .

By suddi9

Leave a Reply

Your email address will not be published. Required fields are marked *