ಬೆಂಗಳೂರು : ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂದ ನಾಲ್ಕು ಮಕ್ಕಳು ಸೇರಿ ಒಂಬತ್ತು ಮಂದಿ ಗಂಭೀರ ಗಾಯಗೊಂಡ ಘಟನೆ ನಗರದ ಪೀಣ್ಯ ಸಮೀಪದ ದಾಸರಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ.
ಗಾಯಾಳುಗಳನ್ನು ತುಮಕೂರು ಜಿಲ್ಲೆಯ ಪಾವಗಡ ಮೂಲದ ದೇವರಾಜು, ಲಕ್ಷ್ಮಮ್ಮ, ವೆಂಕಟೇಶ, ಮಹೇಶ್ವರಮ್ಮ, ಸೋಮಶೇಖರ, ಹೊನ್ನೂರಪ್ಪ, ನಿರಂಜನ್, ದೇವಿಕಾ, ಸಂಗೀತ ಎಂದು ಗುರುತಿಸಲಾಗಿದೆ.
ಸಿಲಿಂಡರ್ ಆಫ್ ಮಾಡದೆ ಮಲಗಿದ್ದ ಈ ಕುಟುಂಬ ಇಂದು ಮುಂಜಾನೆ 4.30ಕ್ಕೆ ಎದ್ದು ಲೈಟ್ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇನ್ನು ಗಾಯಾಳುಗಳನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

