9b9c444e-3e6f-4f9a-bf3a-4f4897651e72

ಅಡ್ಡೂರು:  ಶಾಲಾ ಹಿತರಕ್ಷಣ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿಎಂಸಿ ಸಂಯುಕ್ತಾಶ್ರದಲ್ಲಿ ಮಾ.31ರಂದು  ಬೀಳ್ಕೊಡುಗೆ ಸಮಾರಂಭ  ಇಲ್ಲಿನ ಸರಕಾರಿ ಶಾಲೆಯಲ್ಲಿ  ನಡೆಯಲಿದೆ.

ಅಡ್ಡೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ  ಸುಮಾರು 12 ವರ್ಷಗಳ ಕಾಲ ಶಿಕ್ಷಕಿ, ಮುಖ್ಯೋಪಾಧ್ಯಯಿನಿ ಹಾಗೂ ಸಹ ಮುಖ್ಯೋಪಾಧ್ಯಯಿನಿಯಾಗಿ  ಸೇವೆ ಸಲ್ಲಿಸಿದ್ದ ಸುಕಣ್ಯ ಅವರು ತಮ್ಮ ಶಿಕ್ಷಕಿ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ  ಬೀಳ್ಕೊಡುಗೆ ಸಮಾರಂಭ ಯೋಜಿಸಲಾಗಿದೆ.

ಅಂದು ನಡೆಯುವ ಸಮಾರಂಭದಲ್ಲಿ ಗ್ರಾಮದ ಸ್ಥಳೀಯ ಸಂಘ- ಸಂಸ್ಥೆಗಳ ವತಿಯಿಂದಲೂ  ಸುಕಣ್ಯ ಅವರನ್ನು ಸನ್ಮಾನಿಸಬಹುದು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *