ಕುಡುಪು: ಸಮಾಜದ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ವ್ಯಕ್ತಿ ಜನಾಶೀರ್ವಾದದಿಂದ ಜನನಾಯಕನಾಗಲು ಸಾಧ್ಯ. ಅಂತಹ ನಿಷ್ಕಾಮಕರ್ಮಿ ಜನನಾಯಕ ಪಕ್ಷಬೇಧ ಮರೆತು ಕ್ಷೇತ್ರ ಅಭಿವೃದ್ಧಿ ನಿರ್ಮಾಣದಲ್ಲಿ ತೊಡಗುತ್ತಾನೆ. ನೂತನ ಮೇಯರಾದ ಭಾಸ್ಕರ್ ಅವರನ್ನು ನಿಷ್ಕಾಮಕರ್ಮಿ ಜನನಾಯಕ ಎಂದು ಹೇಳಿದರೆ ತಪ್ಪಾಗಲಾರದು ಎಂದು ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ತಂತ್ರಿ ಕೆ .ಕೃಷ್ಣರಾಜ ತಂತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಪದವು 36ನೇ ವಾರ್ಡಿನ ಸಮಸ್ತ ನಾಗರಿಕರ ವತಿಯಿಂದ ಜರಗಿದ ಹುಟ್ಟೂರ ಸನ್ಮಾನ ಕಾರ್ಯದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡುತ್ತಿದ್ದರು.
ಈ ವೇಳೆ ಪದವು 36 ನೇ ವಾರ್ಡಿನ ಸಮಸ್ತ ನಾಗರಿಕರ ಪರವಾಗಿ ಮೇಯರ್ ಭಾಸ್ಕರ.ಕೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ(ನಂದಿನಿ ಡೈರಿ)ದ ಆಡಳಿತ ನಿರ್ದೇಶಕ ಡಾ.ಸತ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಕುಲಶೇಖರ ಚರ್ಚಿನ ಧರ್ಮಗುರು ವ.ಫಾ.ವಿಕ್ಟರ್ ಮಚಾದೊ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮ್ಯೊದ್ದಿನ್, ಮಾಜಿ ಕಾರ್ಪೋರೇಟರಾದ ಮರಿಯಮ್ಮ ಥೋಮಸ್, ಕಿರಣ್ ಎಂಟರ್ ಪ್ರೈಸಸ್ಸ್ ಮಾಲಕ ಪಿ.ಎಂ.ಕ್ಯಾಸ್ಟೋಲಿನೋ, ದಿವಾಕರ್ ಕನ್ಟ್ರಕ್ಷನ್ ನ ಮಾಲಕ ದಿವಾಕರ್, ಕೊಂಗೂರು ಮಠದ ಸುಬ್ರಹ್ಮಣ್ಯ ಭಟ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಆಲ್ಬನ್ ಮಿನೇಜಸ್, ಕೆ.ಸುದರ್ಶನ ಕುಡುಪು, ನಿವೃತ್ತ ಕಂದಾಯ ಅಧಿಕಾರಿ ಪ್ರಕಾಶ ಚಂದ್ರ ಕುಲಶೇಖರ ಮತ್ತಿತರರು ಉಪಸ್ಥಿತರಿದ್ದರು.
ಸುಜನ್ ದಾಸ್ ಕುಡುಪು ಸನ್ಮಾನ ಪತ್ರ ವಾಚಿಸಿದರು. ಶ್ರೀ ರಾಂ ಎಲ್ಲಂಗಳ ನಿರೂಪಿಸಿ, ಪುಪ್ಪರಾಜ ಪೂಜಾರಿ ಸ್ವಾಗತಿಸಿದರೆ. ಪ್ರಕಾಶ್ ಚಂದ್ರ ಕುಲಶೇಖರ ಕಾರ್ಯಕ್ರಮದಲ್ಲಿ ವಂದಿಸಿದರು.

