IMG_1410

ವಾಮಂಜೂರು: ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಆಸ್ತಿಯಾಗಬೇಕು ಎಂದು ಮಂಗಳೂರು  ಮೇಯರ್ ಭಾಸ್ಕರ್ .ಕೆ ಕರೆ ನೀಡಿದ್ದಾರೆ.

ಇಲ್ಲಿನ  ಎಸ್ ಡಿಎಮ್ ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಂತ್ರಿಕ ಶಿಕ್ಷಣಕ್ಕೆ ಇತ್ತೀಚಿನ ದಿನಗಳಲ್ಲಿ ಬಹಳ ಮಹತ್ವವಿದ್ದು,  ಸ್ವಯಂ ಉದ್ದಿಮೆಯನ್ನು ಪ್ರಾರಂಭಿಸಲು ತಾಂತ್ರಿಕ ಶಿಕ್ಷಣವು ತುಂಬಾ ಅಗತ್ಯ  ಎಂದರು.

ಮಂಗಳೂರು ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಾಕ್ಷ ಅಜಿತ್ ಕಾಮತ್  ಮಾತನಾಡಿ, ಕೈಗಾರಿಕಾ  ವಲಯದ ಆವಶ್ಯಕತೆ ಹಾಗೂ ಕೈಗಾರಿಕಾ ಶಿಕ್ಷಣದ ನಡುವೆ ಸಮನ್ವಯತೆ ಇರಬೇಕು. ಕೈಗಾರಿಕಾ ತರಬೇತಿದಾರರನ್ನು ಕೈಗಾರಿಕಾ ಸಂಸ್ಥೆಗಳ ನಿರೀಕ್ಷೆಯಂತೆ ತರಬೇತುದಾರರನ್ನು ರೂಪಿಸುವ ಅವಶ್ಯಕತೆ ಕೈಗಾರಿಕಾ ತರಬೇತು ಸಂಸ್ಥೆಗಳಿಗಿದೆ  ಎಂದು ತಿಳಿಸಿದರು.

ಸಂಸ್ಥೆಯ ತರಬೇತುದಾರರಿಗೆ ಕೆನರಾ ಸಣ್ಣ ಕೈಗಾರಿಕೆ ಸಂಸ್ಥೆಯ ವತಿಯಿಂದ ತರಬೇತು ಗೊಳಿಸುವ  ಹಾಗೂ  ಉತ್ತಮ ತರಬೇತಿ ಉದ್ಯೋಗವನ್ನು ದೊರಕಿಸಿ ಕೊಡುವ ಭರವಸೆಯನ್ನು  ಅವರು ನೀಡಿದರು.

IMG_1432

ಈ ವೇಳೆ ಸಂಸ್ಥೆಯ ವತಿಯಿಂದ  ನೂತನ ಮೇಯರ್  ಆಗಿ ಆಯ್ಕೆಯಾದ  ಭಾಸ್ಕರ್.ಕೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎ.ರಾಜೇಂದ್ರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.    ಪ್ರೌಢಶಾಲಾ ಮುಖ್ಯೋಪಾಧ್ಯಯ ಅಶೋಕ್ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯ ಮಾರ್ಯೆಟ್ ಮಸ್ಕರೇನಸ್,  ಉದಯಕುಮಾರ್ ಕುಡುಪು, ಗಣೇಶ್ ಭಟ್. ವಿ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ನರೇಂದ್ರ ಇವರು ಆಗಮಿಸಿದ ಎಲ್ಲಾ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸಿದರು.ಹಿರಿಯ ತರಬೇತಿ ಅಧಿಕಾರಿಯಾದ ಶ್ರೀಮತಿ ಪ್ಲಾವಿಯಾ ಜೆ.ಎಸ್ ಡಿಸೋಜ ಇವರು ಸಂಸ್ಥೆಯ ವಾರ್ಷಿಕ ವರದಿಯನ್ನು ಮಂಡಿಸಿದರು.

ಪ್ರಿಯಾ ನಿರೂಪಿಸಿ, ಸಂತೋಷ್ ಕಾರ್ಯಕ್ರಮದಲ್ಲಿ ವಂದಿಸಿದರು.

By suddi9

Leave a Reply

Your email address will not be published. Required fields are marked *