ಬಂಟ್ವಾಳ: ತಾಲೂಕಿನಲ್ಲಿ ಈ ಹಿಂದೆ ತಹಶೀಲ್ದಾರಾಗಿದ್ದ ಪುರಂದರ ಹೆಗ್ಡೆ ಅವರು ಬೈಂದೂರಿಗೆ ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನೂತನ ತಹಶೀಲ್ದಾರ್ ಜೀನ್ ಮೇರಿ ತೌರೋ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಸಂಜೆ ಮಿನಿ ವಿಧಾನ ಸೌಧದಲ್ಲಿ ಕರ್ತವ್ಯಕ್ಕೆ ಹಾಜರಾದ ಜೀನ್ ಮೇರಿ ತೌರೋ ಅವರಿಗೆ ತಾಲೂಕು ಕಚೇರಿ ಸಿಬ್ಬಂದಿ ವರ್ಗ ಭವ್ಯ ಸ್ವಾಗತ ಕೋರಿದರು.
ಉಪತಹಶೀಲ್ದಾರ್ ಗಳಾದ ರಾಜೇಶ್ ನಾಯ್ಕ್, ಗ್ರೆಟ್ಟಾ ಮಸ್ಕರೇಂಜಸ್, ಸೀತಾರಾಮ ನೂತನ ತಹಶೀಲ್ದಾರರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ಆಹಾರ ಶಾಖೆಯ ಶ್ರೀನಿವಾಸ್, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಸುಧಾ, ದಕ್ಷಾಯಿಣಿ, ವಿದ್ಯಾ ಮೋರೆ, ಮಹೇಂದ್ರ, ರೇಖಾ, ವಿನಯ ನಾಗರಾಜ ಮತ್ತಿತರರು ಉಪಸ್ಥಿತರಿದ್ದರು.


