Modi_Speech-kWbF--621x414@LiveMint

ಮಂಗಳೂರು: ಪ್ರಧಾನಿ ಮೋದಿ ಭಾವಚಿತ್ರವನ್ನು ವಿರೂಪಗೊಳಿಸಿ ವಾಟ್ಸಪ್ ಗ್ರೂಪ್ ಗೆ ಹಾಕಿದ್ದು, ಈಗ ವಾಟ್ಸಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ.

ಫ್ರೆಂಡ್ಸ್ ಪಡುಬೆಟ್ಟು ವಾಟ್ಸಪ್ ಗ್ರೂಪ್ ನ ಅಡ್ಮಿನ್ ಮತ್ತು ಗ್ರೂಪ್ ನ ಸದಸ್ಯನೊಬ್ಬ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ತಿರುಚಿ ಹಂದಿಯ ಮುಖದಂತೆ ಬದಲಾಯಿಸಿ ವಾಟ್ಸಪ್ ಗ್ರೂಪಿನಲ್ಲಿ ದಿನಾಂಕ 20ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಹಾಕಿದ್ದಾರೆ.

ನಮ್ಮ ಪ್ರಧಾನಿಯ ಘನತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಈ ಬಗ್ಗೆ ಈ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರೂಪ್ ಅಡ್ಮಿನ್ ಹಾಗೂ ಓರ್ವ ಸದಸ್ಯನ ವಿರುದ್ಧ ದೂರು ದಾಖಲಾಗಿದೆ.

IMG-20180322-WA0019

By suddi9

Leave a Reply

Your email address will not be published. Required fields are marked *