ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯದ ಮೂರನೇ ಜನಾಶೀರ್ವಾದ ಯಾತ್ರೆ ಬಿರುಸಿನಿಂದ ನಡೆದಿದ್ದು, ಕಾಪು ಹಾಗೂ ಪಡುಬಿದ್ರೆಯಲ್ಲಿ ಸಮಾವೇಶ ಮುಗಿಸಿ ಇದೀಗ ರಾಹುಲ್ ಗಾಂಧಿ ಸುರತ್ಕಲ್ ಗೆ ಆಗಮಿಸಿದ್ದಾರೆ. ಇನ್ನು ರಾಹುಲ್ ಗಾಂಧಿಯವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಜಮಾಯಿಸಿದ್ದಾರೆ.
ಈ ಸಂದರ್ಭ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉಪಸ್ಥಿತರಿದ್ದರು.



