ಉಡುಪಿ: ನಾಲ್ಕು ಮಹಡಿಯ ಕಟ್ಟಡವೊಂದಕ್ಕೆ ಆಕಸ್ಮಿಕ ಅಗ್ನಿ ಅಗ್ನಿ ಅವಘಡ ಸಂಭವಿಸಿದ್ದು ಅಪಾರ ಹಾನಿಯಾಗಿರುವ ಘಟನೆ ಮಣಿಪಾಲದ ಈಶ್ವರನಗರದಲ್ಲಿ ನಡೆದಿದೆ.
ಪೈಂಟ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧಲ್ಲಿ ಅಗ್ನಿಯ ಜ್ವಾಲೆ ಹರಡಿಕೊಂಡಿದೆ. ಅಪಾರ ಪ್ರಮಾಣದ ಪೈಂಟ್ ಡಬ್ಬಗಳು ಸುಟ್ಟು ಕರಕಲಾಗಿವೆ. ಇಡೀ ಕಟ್ಟಡದ ತುಂಬ ದಟ್ಟ ಹೊಗೆ ಆವರಿಸಿಕೊಂಡಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು ದೌಡಾಯಿಸಿದ್ದು ಬೆಂಕಿಯನ್ನು ತಹಬದಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ಯಾರೊಬ್ಬರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಪೈಂಟ್ ಅಂಗಡಿಯಲ್ಲಿ ದೇವರಿಗೆ ಇಟ್ಟ ದೀಪ ಬಿದ್ದು ಬೆಂಕಿ ವ್ಯಾಪಿಸಿದೆ ಎನ್ನಾಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

